*ಕೊಡ್ಲಿಪೇಟೆ, ಅ. 4: ಎಸ್.ಕೆ.ಎಸ್.ಎಸ್.ಎಫ್. ಸೇವಾ ತಂಡ ವಿಖಾಯ ವತಿಯಿಂದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಆರೋಗ್ಯ ಕೇಂದ್ರದ ವ್ಯೆದ್ಯೆ ಆದೀರಾ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಆಸ್ಪತ್ರೆಯ ಆರೋಗ್ಯ ಸಹಾಯಕ ನವೀನ್, ಲ್ಯಾಬ್ ಟೆಕ್ನೀಷಿಯನ್ ನಾಗರಾಜ್, ಸಿಬ್ಬಂದಿ ವಿಶಾಲ್ ಪಾಲ್ಗೊಂಡಿದ್ದರು. ಸಂಘಟನೆಯ ಸದಸ್ಯರು ಶ್ರಮದಾನದ ಮೂಲಕ ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು.

ಎಸ್.ಕೆ.ಎಸ್.ಎಸ್.ಎಫ್. ಶಾಖೆಯ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ತಪ್ಸಿರ್, ವಿಖಾಯ ಜಿಲ್ಲಾ ಕಾರ್ಯದರ್ಶಿ ಬಾಸಿತ್, ವಲಯ ಕಾರ್ಯದರ್ಶಿ ಜಿ.ಎ. ಅಬ್ದುಲ್ ರಹ್ಮಾನ್, ಕೊಡ್ಲಿಪೇಟೆ ಉಪಾಧ್ಯಕ್ಷ ರಶೀದ್ ಕೆ.ಎಂ, ಸಂಯೋಜಕ ಮಹಮ್ಮದ್ ಆಲಿ, ಇತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.