ಸಂಪಾಜೆ, ಅ. 5: 2018-19 ಹಾಗೂ 2020 ರ ಅವಧಿಯಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಚೆಡಾವು ನಿಂದ ಕೊಯನಾಡು ಎಸ್ಟೇಟ್‍ಗೆ ಸಂಪರ್ಕ ಸೇತುವೆ ಮುರಿದು ಸಂಪರ್ಕ ಕಡಿತಗೊಂಡಿತ್ತು. ಈ ಸ್ಥಳದಲ್ಲಿ ಸಂಪಾಜೆ ಬಿಜೆಪಿ ಕಾರ್ಯಕರ್ತರಿಂದ ತಾತ್ಕಾಲಿಕ ಕಾಲುಸೇತುವೆ ನಿರ್ಮಾಣ ಮಾಡಿ ಸ್ಥಳೀಯರಿಗೆ ಚೆಡಾವು-ಕೊಯನಾಡು ಎಸ್ಟೇಟ್‍ಗೆ ತೆರಳಲು ಅವಕಾಶ ಕಲ್ಪಿಸಲಾಯಿತು. ಈ ಶ್ರಮದಾನ ಕಾರ್ಯದಲ್ಲಿ ಸಂಪಾಜೆ ಗ್ರಾಮದ ಬಿಜೆಪಿ ಪ್ರಮುಖರು, ಪಕ್ಷದ ಯುವ ಮೋರ್ಚಾ ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷದ ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಶ್ರಮದಾನ ಕಾರ್ಯವನ್ನು ಯಶಸ್ವಿಗೊಳಿಸಿದರು.