ಕೂಡಿಗೆ, ಅ. 4 : ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ. ಹಾರಂಗಿಯಿಂದ ಎರಡನೇ ತೂಬಿನವರೆಗೆ ಮುಖ್ಯ ನಾಲೆಯ ಉಪ ರಸ್ತೆಯ ದುರಸ್ತಿ ಕಾಮಗಾರಿ ಪ್ರಾರಂಭವಾಗಿದೆ

ಕಾವೇರಿ ನೀರಾವರಿ ನಿಗಮದ ವತಿಯಿಂದ ನಾಲೆಗಳ ರಸ್ತೆಯ ಮೂಲಕ ರೈತರು ತಮ್ಮ ತಮ್ಮ ಜಮೀನಿಗೆ ತೆರಳಲು ಅನುಕೂಲ ಮತ್ತು ಬೆಳೆದ ಬೆಳೆಗಳ ಸಾಗಾಣಿಕೆಯನ್ನು ಮಾಡಲು ಅನುಕೂಲ ವಾಗುವಂತೆ ಮುಖ್ಯ ನಾಲೆಯ ಒಂದು ಬದಿಯಲ್ಲಿ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.