ಗೋಣಿಕೊಪ್ಪ ವರದಿ, ಅ. 4: ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಅಮ್ಮತ್ತಿ-ಕಾರ್ಮಾಡು ಗ್ರಾಮದಲ್ಲಿ ಭೂಮಾತೆ ಮತ್ತು ಗೋಮಾತೆಗೆ ಪೂಜಾ ಕಾರ್ಯಕ್ರಮ ನಡೆಯಿತು.

ಕಾಮಧೇನು ಗೋಸೇವಾ ಟ್ರಸ್ಟ್ ಸಂಚಾಲಕ ರಾಮಚಂದ್ರ ಭಟ್ ಗೋಪೂಜೆ ನಡೆಸಿ ತಲಾ 10 ಪ್ರಗತಿ ಪರ ರೈತ ಹಾಗೂ ಕೃಷಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಪ್ರಗತಿಪರ ರೈತರಾದ ಅಳಮೇಂಗಡ ವಿವೇಕ್, ರಾಜ್‍ಕುಮಾರ್, ಚಾರಿಮಂಡ ಸುಬ್ಬಯ್ಯ, ಚೇಂದಂಡ ಪೆÇನ್ನಪ್ಪ, ಪೆಮ್ಮಣಮಾಡ ರಮೇಶ್, ಅಲ್ಲುಮಾಡ ಡೈಸಿ ತಿಮ್ಮಯ್ಯ, ಸೋಮೆಂಗಡ ಗಣೇಶ್ ತಿಮ್ಮಯ್ಯ, ನೆಲ್ಲಮಕ್ಕಡ ಎ. ಸೋಮಯ್ಯ, ಮಂಡೇಪಂಡ ಸಿ ಪ್ರತಾಪ್, ಚೆಪ್ಪುಡೀರ ಸುಭಾಷ್ ಮುತ್ತಣ್ಣ ಸನ್ಮಾನ ಸ್ವೀಕರಿಸಿದರು.

ಪ್ರಗತಿಪರ ಕೃಷಿ ಕಾರ್ಮಿಕರಾದ ಕೃಷ್ಣ, ರಮೇಶ್, ಜಯಮ್ಮ, ಬಿ. ಕೆ. ನಾರಾಯಣ, ಸುಗು, ರವಿಚಂದ್ರನ್, ವೇಲಾಯ್ದ, ಪಾರ್ವತಿ, ಲಕ್ಷ್ಮಿ, ಕುಟ್ಟಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಶಾಸಕ ಕೆ.ಜಿ ಬೋಪಯ್ಯ, ರಾಜ್ಯ ಕೃಷಿ ಮೋರ್ಚಾ ಕಾರ್ಯದರ್ಶಿ ಡಾ. ಬಿ.ಸಿ ನವೀನ್‍ಕುಮಾರ್, ಜಿಲ್ಲಾ ಕೃಷಿಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ವೀರಾಜಪೇಟೆ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕೊಲ್ಲೀರ ಧರ್ಮಜ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.