ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ
ಬೆಂಗಳೂರು, ಅ.10 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ, ಅರ್ಥಹೀನ ಎಂದು ಬಿಜೆಪಿ ಬಣ್ಣಿಸಿದೆ. ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳು, ಆರ್ಥಿಕ ಮತ್ತು ಕ್ರಿಮಿನಲ್ ವಂಚಕರನ್ನು ತನಿಖೆ ಮಾಡುವ ಮತ್ತು ನ್ಯಾಯ ಕೊಡಿಸುವ ಸ್ವಾಯತ್ತ ಸಂಸ್ಥೆಗಳು ಎಂದು ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಯಾವಾಗಲೂ ಆ ಸಂಸ್ಥೆಗಳು ತಮ್ಮ ಕೆಲಸದಲ್ಲಿ ನಿರತವಾಗಿರುತ್ತವೆ, ಪ್ರಸ್ತುತ ಡಿಕೆ ಶಿವಕುಮಾರ್ ಮನೆ ಮೇಲಿನ ದಾಳಿ 2017ರಲ್ಲಿ ಇಡಿ ಆರಂಭಿಸಿದ ತನಿಖೆಯ ಮುಂದುವರೆದ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಸ್ಥೆಗಳಿಗೆ ಇರುವ ಸ್ವಾಯತ್ತತೆಯನ್ನು ಬಿಜೆಪಿ ಗೌರವಿಸುತ್ತದೆ “ರಾಜಕೀಯ ಪ್ರೇರಿತ ಪ್ರತಿಭಟನೆಗಳು (ಕಾಂಗ್ರೆಸ್ ನಿಂದ) ಹಾಸ್ಯಾಸ್ಪದ ಮತ್ತು ಅರ್ಥಹೀನವಾಗಿವೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಹಲವು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಈ ಸಂಸ್ಥೆಗಳ ಕಾರ್ಯವೈಖರಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತದೆ ಎಂದು ಕಾರ್ಣಿಕ್ ಹೇಳಿದ್ದಾರೆ.
ಪಾಕಿಸ್ತಾನ, ಚೀನಾ ವಿರುದ್ಧ ಯುದ್ಧ !
ನವದೆಹಲಿ ಅ.5 : ಪೂರ್ವ ಲಡಾಖ್‍ನಲ್ಲಿ ಚೀನಾದ ಪಿಎಲ್‍ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ ಹೇಳಿದ್ದಾರೆ. ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿದ ಆರ್ ಕೆಎಸ್ ಬಡೌರಿಯಾ ಅವರು, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಎರಡು ಪ್ರಮುಖ ಯುದ್ಧಗಳೂ ಸೇರಿದಂತೆ ಭಾರತದ ವಿರುದ್ಧದ ಯಾವುದೇ ಸಂಘರ್ಷಕ್ಕೂ ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ. ನಾವು ಯಾವುದೇ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ. ಯಾವುದೇ ಆಕಸ್ಮಿಕತೆಯನ್ನು ಎದುರಿಸಲು ನಾವು ಬಲವಾಗಿ ನಿಯೋಜಿಸಲ್ಪಟ್ಟಿದ್ದೇವೆ ಎಂದು ಭದುರಿಯಾ ವರ್ಚುವಲ್ ಸಭೆಯಲ್ಲಿ ತಿಳಿಸಿದ್ದಾರೆ. ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧ ವಿಮಾನ ಸೇರ್ಪಡೆ ನಮ್ಮ ಶಕ್ತಿ- ಸಾಮಥ್ರ್ಯವನ್ನು ಬಳಿಷ್ಠಗೊಳಿಸಿದೆ. ಭಾರತೀಯ ವಾಯುಸೇನೆ ಶೀಘ್ರಗತಿಯಲ್ಲಿ ಬದಲಾಗುತ್ತಿದ್ದು, ಅತ್ಯಾಧುನಿಕ ಅವಕಾಶಗಳಿಗೆ ತೆರೆದುಕೊಳ್ಳುವ ಮೂಲಕ ತಮ್ಮ ಸಾಮಥ್ರ್ವನ್ನು ವೃದ್ಧಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಇಬ್ಬರು ಸಿಆರ್‍ಪಿಎಫ್ ಯೋಧರು ಹುತಾತ್ಮ
ಶ್ರೀನಗರ ಅ.5 : ಜಮ್ಮು ಮತ್ತು ಕಾಶ್ಮೀರದ ನೌಗಾಮ್ ನಲ್ಲಿ ಸೋಮವಾರ ಮಧ್ಯಾಹ್ನ ಭದ್ರತಾ ಪಡೆಗಳ ಗಸ್ತು ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಶ್ರೀನಗರದ ನೌಗಾಮ್ ಪ್ರದೇಶದ ಕಂಡಿಜಾಲ್ ಸೇತುವೆ ಮೇಲೆ ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಉಗ್ರರು ಮನಸೋಚ್ಛೆ ಗುಂಡು ಹಾರಿಸಿದ್ದಾರೆ. ಭದ್ರತಾ ಪಡೆಗಳು ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಈ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಘರ್ಷಣೆಯಲ್ಲಿ ಐವರು ಸಿಆರ್ ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಎಂದು ಸಿಆರ್‍ಪಿಎಫ್ ನ ಹಿರಿಯ ಅಧಿಕಾರಿಯೊಬ್ಬರು ಯುಎನ್‍ಐಗೆ ತಿಳಿಸಿದ್ದಾರೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ಘಟನಾ ಸ್ಥಳಕ್ಕೆ ತಕ್ಷಣವೇ ನಿಯೋಜಿಸಲಾಗಿದ್ದು, ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ. ಅಲ್ಲದೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದ ವಿರುದ್ಧ ರಾಹುಲ್ ವಾಗ್ಧಾಳಿ
ಚಂಡೀಘಡ ಅ.5 : ಮೂರು ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಮೂರು ದಿನಗಳ ಖೇತಿ ಬಚಾವೊ ಯಾತ್ರೆಯ ಎರಡನೇ ದಿನವಾದ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಬ್ರಿಟಿಷ್ ಸಂಸ್ಥೆಯ ರೀತಿಯಲ್ಲಿ ರೈತರ ಬೆನ್ನೆಲುಬನ್ನು ಮುರಿಯುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯಶಸ್ವಿಯಾದರೆ, ಇಡೀ ರಾಷ್ಟ್ರವು ಅಂಬಾನಿ ಮತ್ತು ಅದಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಗುಲಾಮರಾಗುತ್ತಿದ್ದಾರೆ ಎಂದರು. ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶದಲ್ಲಿ ಮಾಡಿದ್ದ ಕೆಲಸವನ್ನು ಈಗ ಮೋದಿ ಸರ್ಕಾರ ಮಾಡುತ್ತಿದ್ದಾರೆ.ಕಾಪೆರ್Çೀರೇಟ್ ಆಡಳಿತದಲ್ಲಿಈಗ ಜನರು ಏನು 10 ರೂ.ಗೆ ಕೊಂಡುಕೊಳ್ಳುತ್ತಿದ್ದಾರೋ ಅದಕ್ಕೆ 50 ರೂ ಭರಿಸಬೇಕಾಗುತ್ತದೆ. ಹಣ ರೈತರು ಅಥವಾ ಕಾರ್ಮಿಕರಿಗೆ ಹೋಗಲ್ಲ, ಆದರೆ, ಕಾಪೆರ್Çೀರೇಟರ್ ಮನೆಗಳ ಜೇಬುಗಳಿಗೆ ಹೋಗಲಿದೆ ಎಂದರು.
ಮೂವರು ಸಾಧಕ ವೈದ್ಯರಿಗೆ ನೊಬೆಲ್ ಪ್ರಶಸ್ತಿ
ಸ್ಟಾಕ್‍ಹೋಮ್ ಅ.5 : 2020ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ‘ಹೆಪಟೈಟಿಸ್ ಸಿ ವೈರಸ್’ ಆವಿಷ್ಕರಿಸಿದ ಮೂವರು ಸಾಧಕರಾದ ಹಾರ್ವೆ ಜೆ.ಆಲ್ಟರ್, ಮಿಷೆಲ್ ಹೌಟನ್ ಹಾಗೂ ಚಾಲ್ರ್ಸ್ ಎಂ.ರೈಸ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪಲ್ರ್ಮನ್ ಅವರು ಸೋಮವಾರ ಸ್ಟಾಕ್ ಹೋಮ್ ನಲ್ಲಿ 2020ನೇ ಸಾಲಿನ ವೈದ್ಯಕೀಯ ಪ್ರಶಸ್ತಿಯ ವಿಜೇತರ ಹೆಸರನ್ನು ಘೋಷಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ವಿಶ್ವಾದ್ಯಂತ 70 ದಶಲಕ್ಷಕ್ಕೂ ಹೆಚ್ಚು ಹೆಪಟೈಟಿಸ್ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿ ವರ್ಷ 400,000 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ದೀರ್ಘಕಾಲದ ರೋಗವಾಗಿದ್ದು, ಯಕೃತ್ತಿನ ಉರಿಯೂತ ಮತ್ತು ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗಿದೆ.
ಪಿ.ಲಂಕೇಶ್ ಪುಸ್ತಕಗಳಿಗೆ ಡಿಜಿಟಲ್ ರೂಪ
ಬೆಂಗಳೂರು ಅ.5 : ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಪುಸ್ತಕಗಳನ್ನು ಇನ್ನು ಮುಂದೆ ಮೊಬೈಲ್ ಅಥವಾ ಲ್ಯಾಪ್ ಟಾಪ್‍ಗಳ ಮೂಲಕವೂ ಓದಬಹುದಾಗಿದೆ. ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ. ಲಂಕೇಶ್ ಆಡಿಯೋಬುಕ್ಸ್ ಹಾಗೂ ಲಂಕೇಶ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಗಾಂಧಿಭವನದಲ್ಲಿ ನಡೆಯಿತು. ಇದರ ಜತೆಗೆ ಲಂಕೇಶ್ ಪತ್ರಿಕೆಯ 41ನೇ ವರ್ಷದ ವಿಶೇಷ ಸಂಚಿಕೆ ಸಹ ಬಿಡುಗಡೆಯಾಗಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನಟ ಶಿವರಾಜ್ಕುಮಮಾರ್ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನೆರವೇರಿದೆ.ಅಲ್ಲದೆ ಖ್ಯಾತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾಜಿ ಸಚಿವ ರಶೀದ್ ಮಸೂದ್ ನಿಧನ
ನವದೆಹಲಿ ಅ.5 : ಹಿರಿಯ ರಾಜಕಾರಣಿ, ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಖಾಜಿ ರಶೀದ್ ಮಸೂದ್ (73) ಅವರು ನಿಧನ ಹೊಂದಿದ್ದಾರೆ. ಒಂಬತ್ತು ಬಾರಿ ಲೋಕಸಭೆ, ರಾಜ್ಯಸಭೆ ಸದಸ್ಯರಾಗಿದ್ದ ರಶೀದ್ ವಿಪಿ ಸಿಂಗ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಕೊರೋನಾ ಪಾಸಿಟಿವ್ ಇದ್ದ ಹಿನ್ನೆಲೆ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿತ್ತು. ಹೃದಯ, ಮೂತ್ರಪಿಂಡ ಕಾಯಿಲೆಗಳಿಂದಲೂ ಬಳಲಿದ್ದ ರಶೀದ್ ಅವರಿಗೆ ಕೊರೋನಾದಿಂದ ಚೇತರಿಸಿಕೊಂಡ ನಂತರವೂ ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಿಗ್ಗೆ ರೂರ್ಕಿಯಲ್ಲಿ ನಿಧನರಾಗಿದ್ದಾರೆ.