ಮಡಿಕೇರಿ, ಅ. 4: ಜಿಲ್ಲೆಯಲ್ಲಿ ಹೊಸದಾಗಿ 115 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3115 ಪ್ರಕರಣಗಳು ವರದಿಯಾಗಿದ್ದು, 2493 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 48 ಮಂದಿ ಸಾವನ್ನಪ್ಪಿದ್ದು, 574 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 104 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 86 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 384 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 490 ನಿಯಂತ್ರಿತ ವಲಯಗಳಿವೆ.