ಮಡಿಕೇರಿ, ಅ. 4: ಸ್ಥಳೀಯ ನಿವಾಸಿ, ನಿಶಾಂತ್ ಲೋಬೋ ಎಂಬಾತ ಕುಡಿದ ಅಮಲಿನಲ್ಲಿ ನಗರ ಸಂಚಾರಿ ಠಾಣಾ ಪೊಲೀಸರು ಹಾಗೂ ಗೃಹ ರಕ್ಷಕ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ಆಸ್ಪತ್ರೆ ಬಳಿ ನಿಯಮಬಾಹಿರವಾಗಿ ವಾಹನ ನಿಲ್ಲಿಸಿದ್ದಲ್ಲದೆ, ಈ ಬಗ್ಗೆ ವಿಚಾರಿಸಿದ ಗೃಹರಕ್ಷಕ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸದಾಶಿವ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.