ಸೋಮವಾರಪೇಟೆ, ಅ. 5 : ಪಟ್ಟಣದ ವೆಂಕಟೇಶ್ವರ ಬ್ಲಾಕ್ನ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಗುರುಬಸಮ್ಮ ಉದ್ಘಾಟಿಸಿದರು. ಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯರಿಗೆ ಆರೋಗ್ಯ ಮಾಹಿತಿ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಮಾಹಿತಿ ಒದಗಿಸಲಾಯಿತು. ಪ.ಪಂ. ಸದಸ್ಯರುಗಳಾದ ನಳಿನಿ ಗಣೇಶ್, ಬಿ.ಆರ್. ಮಹೇಶ್, ಜೀವನ್, ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ಮೂರ್ತಿ, ಬೇಳೂರು ರಸ್ತೆ ಶಾಲೆಯ ಶಿಕ್ಷಕ ರಂಗನಾಥಸ್ವಾಮಿ, ಪ.ಪಂ. ಮಾಜೀ ಸದಸ್ಯೆ ಮೀನಾಕುಮಾರಿ ಉಪಸ್ಥಿತರಿದ್ದರು. ಪಟ್ಟಣ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು. ಕಾರ್ಯಕರ್ತೆ ಜೆನಿಫರ್ ತಾರಾ ಲೋಬೋ ಅವರು ಕಾರ್ಯಕ್ರಮ ನಿರ್ವಹಿಸಿದರು.