ಕೂಡಿಗೆ, ಅ. 5: ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಕುಂತಿ ಬೋಪಯ್ಯ ಅವರನ್ನು ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಗಿತು. ಅದರಂತೆ ಪ್ರಶಸ್ತಿ ಭಾಜನರಾಗಿರುವ ಕುಂತಿಬೋಪಯ್ಯ ಅವರನ್ನು ಕ್ರೀಡಾ ಶಾಲೆ ಅಧ್ಯಾಪಕರ ವೃಂದ ಮತ್ತು ಆಡಳಿತ ವರ್ಗದವರು ಶಾಲೆಯಲ್ಲಿ ಶಾಲು ಹೊಂದಿಸಿ ಫಲತಾಂಬೂಲ ನೀಡಿ ಗೌರವಿಸಿರುತ್ತಾರೆ.
ಈ ಸಂದರ್ಭದಲ್ಲಿ ಶಾಲೆ ಅರ್ಥಟಿಕ್ ತರಬೇತಿದಾರ ಅಂತೋಣಿ ಡಿಸೋಜ ಸೇರಿದಂತೆ ಶಿಕ್ಷಕರ ವೃಂದ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.