ವೀರಾಜಪೇಟೆ, ಅ. 4: ವೀರಾಜಪೇಟೆಯ ನಿಸರ್ಗ ಬಡಾವಣೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಲ್ಲಿನ ನೆಹರೂ ನಗರದ ನಿವಾಸಿ ಷಂಶುದ್ದೀನ್ ಎಂಬಾತನನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.ವೀರಾಜಪೇಟೆ ನಗರ ಪೊಲೀಸರ ತಂಡ ಸಾರ್ವಜನಿಕರ ಸುಳಿವಿನ ಮೇರೆ ಆತನನ್ನು ತನಿಖೆಗೊಳಪಡಿಸಿದಾಗ ಆತನಲ್ಲಿ ಸುಮಾರು 76 ಗ್ರಾಂ.ಗಳಷ್ಟು ಗಾಂಜಾ ಪ್ಯಾಕೆಟ್ ಪತ್ತೆಯಾಗಿದೆ. ಗಾಂಜಾವನ್ನು ಮೈಸೂರಿನಿಂದ ಬಸ್‍ನಲ್ಲಿ ತಂದಿದ್ದನೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.