ಗೋಣಿಕೊಪ್ಪ ವರದಿ, ಅ. 4 : ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ದುಬಾರೆ ಮತ್ತು ಮಾಲ್ದಾರೆ ಬುಡಕಟ್ಟು ಕಾಫಿ ಮತ್ತು ಕಾಳುಮೆಣಸು ಬೆಳೆಗಾರರ ಸಹಕಾರ ಸಂಘದ ಸದಸ್ಯರಿಗೆ ಇತ್ತೀಚೆಗೆ ಒಂದು ದಿನದ ಸಮಗ್ರ ಕೃಷಿಯ ಕುರಿತು ತರಬೇತಿ ನಡೆಯಿತು.
ವಿಜ್ಞಾನಿ ಡಾ. ಪ್ರಭಾಕರ್ ಕೆವಿಕೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯ ಬಳಸಿಕೊಂಡು ಕೃಷಿಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದರು. ತರಕಾರಿ ಮತ್ತು ಹಣ್ಣುಗಳ ಕೃಷಿಯಿಂದ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ. ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಅಣಬೆ ಉತ್ಪಾದನೆ ಘಟಕ, ನರ್ಸರಿ ಮತ್ತು ಹಂದಿ ಘಟಕ ವೀಕ್ಷಣೆ ಮಾಡಲಾಯಿತು. ಪಾಲ್ಗೊಂಡ ಸದಸ್ಯರಿಗೆ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.