ನಾಪೋಕ್ಲು, ಅ. 5: ಸಂತೆ ಮಾರುಕಟ್ಟೆ ಬಳಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿ ದ್ದುದನ್ನು ಪತ್ತೆಹಚ್ಚಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮಾರುಕಟ್ಟೆ ಬಳಿಯಿರುವ ಪಂಚಾಯಿತಿ ನೌಕರರ ವಸತಿ ಗೃಹದ ಬಳಿ ವ್ಯಕ್ತಿಯೋರ್ವ ಬ್ಯಾಗ್‍ನೊಂದಿಗೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು, ಆತನನ್ನು ಪರಿಶೀಲಿಸಿ ದಾಗ ಬ್ಯಾಗ್‍ನಲ್ಲಿ ಗೋಮಾಂಸ ಪತ್ತೆಯಾಗಿದೆ.ಕೊಟ್ಟಮುಡಿ ಗ್ರಾಮದ ಕುಂಞ ಅಬ್ದುಲ್ಲ ಎಂಬವರ ಪುತ್ರ ಕೆ.ಎ. ಶಾದುಲಿ ಮಾಂಸ ಮಾರಾಟ ಮಾಡುತ್ತಿದ್ದ ಸಂದರ್ಭ ಸಿಕ್ಕಿಬಿದ್ದಿದ್ದು, ಹುಣಸೂರಿನಿಂದ ಮಾಂಸ ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಠಾಣಾಧಿಕಾರಿ ಕಿರಣ್ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- ದುಗ್ಗಳ