ಮಡಿಕೇರಿ, ಅ. 3 : ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ತಾ. 6ರಂದು ಬೆಳಿಗ್ಗೆ ಮೈಸೂರಿನಿಂದ ಮಡಿಕೇರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಇಲ್ಲಿನ ಜಿ.ಪಂ. ಸಭಾಂಗಣ ದಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಜಿಲ್ಲಾಮಟ್ಟದ ಸಭೆ ನಡೆಸಲಿರುವ ಸಚಿವರು, 2.30 ಗಂಟೆಗೆ ಮರಳಿ ಮೈಸೂರಿಗೆ ನಿರ್ಗಮಿಸಲಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.