ಸೋಮವಾರಪೇಟೆ, ಅ. 3: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಘಟನೆ ಹರಗ ಗ್ರಾಮದಲ್ಲಿ ನಡೆದಿದ್ದು, ನಾಲ್ವರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಹರಗ ಗ್ರಾಮ ನಿವಾಸಿ, ಸದ್ಯ ಬೆಟ್ಟದಳ್ಳಿಯಲ್ಲಿ ನೆಲೆಸಿರುವ ಸಣ್ಣಮ್ಮ ಮೇಲೆ ಸಂಬಂಧಿಕರಾದ ಹರಗ ಗ್ರಾಮದ ನಿವಾಸಿ ಲಕ್ಷ್ಮಣ, ಸಾವಿತ್ರಿ, ಸವಿತ, ಶರಣು ಅವರುಗಳು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.