ಕಣಿವೆ, ಅ. 3 : ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಮ್ಮನಕೊಲ್ಲಿಯ ಸರ್ಕಾರಿ ಪದವಿ ಕಾಲೇಜು ರಸ್ತೆಯ ಬಳಿ ನಿರ್ಮಿಸಿರುವ ಚಿತಾಗಾರವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಮೂಕಾಂಬಿಕ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಆಗ್ರಹಿಸಿದ್ದಾರೆ. ಗ್ರಾಮದ ಜನರಿಗೆ ಉಪಯುಕ್ತವಾಗಲಿರುವ ಚಿತಾಗಾರವನ್ನು ಬದಲೀ ಜಾಗದಲ್ಲಿ ನಿರ್ಮಿಸಬೇಕು. ಈಗಾಗಲೇ ನಿರ್ಮಿಸಿರುವ ಚಿತಾಗಾರದಿಂದ ಸ್ಥಳೀಯ ನಿವಾಸಿಗಳಿಗೆ ಅನಾನುಕೂಲವಾಗಲಿದೆ. ಅಲ್ಲದೆ ಸಮೀಪವೇ ಇರುವ ಸರ್ಕಾರಿ ಪದವಿ ಕಾಲೇಜು, ಮೂಕಾಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕೂಡಲೇ ಶಾಸಕರು ಇತ್ತ ಗಮನ ಹರಿಸಿ ಬೇರೆಡೆಗೆ ಸ್ಮಶಾನವನ್ನು ಸ್ಥಳಾಂತರಿಸಲು ಮುಂದಾಗಬೇಕೆಂದು ಚಂದ್ರಕಲಾ ಒತ್ತಾಯಿಸಿದ್ದಾರೆ.