ಕೂಡಿಗೆ, ಅ. 3: ಕುಶಾಲನಗರ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರ ಜಮೀನಿನ ಬೆಳೆ ಸಮೀಕ್ಷೆಯು ಆಯಾ ರೈತರ ಸರಹದ್ದಿನ ಜಮೀನಿನಲ್ಲಿ ನಡೆಯುತ್ತಿದೆ. ಆಯಾ ವ್ಯಾಪ್ತಿಯ ರೈತರು ಅವರುಗಳ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಅವರ ಪಹಣಿಯಲ್ಲಿ ನೊಂದಣಿ ಮಾಡಲು ಸರಕಾರದ ಸೂಚನೆಯಂತೆ ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಒಂದು ಅಥವಾ ಎರಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಬ್ಬರಂತೆ ಮೊಬೈಲ್ನಲ್ಲಿ ಆಪ್ ನೊಂದಣಿ ಮಾಡಲು ಸಹಾಯಕರನ್ನು ನೇಮಕ ಮಾಡಲಾಗಿದು ಅವರುಗಳು ರೈತರ ಜಮೀನಿಗೆ ತೆರಳಿ ಇದೀಗ ರೈತ ಬೆಳೆದಿರುವ ಬೆಳೆಯನ್ನು ಅಪ್ ಲೋಡ್ ಮಾಡಲಾಗುತ್ತಿದೆ. ಅದರಂತೆ ರೈತರ ಆರ್ಟಿಸಿಯಲ್ಲಿ ಬೆಳೆ ಕಲಂನಲ್ಲಿ ನೊಂದಣಿಯಾಗುತ್ತದೆ. ಇದರಿಂದಾಗಿ ರೈತರು ತಮ್ಮ ಬೆಳೆಯ ಅಧಾರದ ಮೇಲೆ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲ ವಾಗುತ್ತಿದೆ.
ಈ ಸಂದರ್ಭದಲ್ಲಿ ಕುಶಾಲನಗರ ಕಂದಾಯ ಪರಿವೀಕ್ಷಕ ಮಧುಸೂದನ್ ಗ್ರಾಮ ಲೆಕ್ಕಿಗರಾದ ಗುರುದರ್ಶನ್ ಸಚಿನ್ ಸೇರಿದಂತೆ ಆಯಾ ಗ್ರಾಮ ಲೆಕ್ಕಿಗರು ಮತ್ತು ರೈತರು ಹಾಜರಿದ್ದರು.