ಚೆಟ್ಟಳ್ಳಿ, ಅ. 2: ಕಳೆದ ಬಾರಿ ಸುರಿದ ಮಹಾಮಳೆಗೆ ಕೊಂಡಂಗೇರಿ ಗ್ರಾಮದ ನದಿ ದಡದ ಹಲವಾರು ಕುಟುಂಬಗಳ ಮನೆ ಹಾನಿಯಾಗಿ ನೆಲಸಮವಾಗಿತ್ತು. ಮನೆ ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿರುವುದನ್ನು ಮನಗಂಡ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಚಾರಿಟಬಲ್ ಟ್ರಸ್ಟ್ನ ಪ್ರಮುಖರು ಗ್ರಾಮಕ್ಕೆ ಭೇಟಿ ನೀಡಿ 22 ಕುಟುಂಬಗಳ ಜನರ ಸಮಸ್ಯೆಗಳನ್ನು ಆಲಿಸಿ ಇದೀಗ ತಾತ್ಕಾಲಿಕ ಧನ ಸಹಾಯವನ್ನು ನೀಡಿದ್ದಾರೆ. ಈ ಸಂದರ್ಭ ಮಲಬಾರ್ ಗೋಲ್ಡ್ ಮತ್ತು ಡೈಮೆಂಡ್ ಟ್ರಸ್ಟ್ನ ವ್ಯವಸ್ಥಾಪಕ ಸರ್ಫುದ್ದೀನ್, ಸಹಾಯಕ ವ್ಯವಸ್ಥಾಪಕ ಮಹಮ್ಮದ್ ಅಲಿ, ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ. ಯೂಸೂಫ್ ಹಾಜಿ, ಉಪಾಧ್ಯಕ್ಷ ಎಂ.ಎಂ. ಮೊಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಈ. ಸಾದಲಿ, ರಾಜ್ಯ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಎ. ಯೂಸೂಫ್, ಮರ್ಕಸುಲ್ ಹಿದಾಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಪ್ರಮುಖರಾದ ಸಾದಲಿ ಹಾಜಿ, ಅಬ್ದುಲ್ ರೆಹಮಾನ್ ಅಂದಾಯಿ, ಮೂಸ ಅಮಾನಿ ಸೇರಿದಂತೆ ಮತ್ತಿತರರು ಹಾಜರಿದ್ದರು.