*ಸಿದ್ದಾಪುರ ಅ. 2: ವಾಲ್ನೂರು-ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಥಮ ಸಭೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಕ್ತಿ ಕೇಂದ್ರದ ಪ್ರಮುಖ್ ಮನು ಮಹೇಶ್ ಪಕ್ಷದ ಎಲ್ಲಾ ಘಟಕಗಳು ಪ್ರತಿ ವಾರ್ಡ್ನಲ್ಲಿ ಕನಿಷ್ಟ 10 ಸದಸ್ಯರನ್ನು ನೇಮಕ ಮಾಡಬೇಕು. ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
ಪಕ್ಷದ ಪ್ರಮುಖರಾದ ಅಂಚೆಮನೆ ಸುಧಿ, ಕವಿತಾ ಜಯಂತ್, ಕವಿತಾ ದೇವಿಲಾಲ್, ಸಹಪ್ರಮುಖ್ ರಾಜೇಶ್, ಯುವ ಪ್ರಮುಖ್ ಮದನ್ ಕಾರ್ಯಪ್ಪ, ಹಿಂದುಳಿದ ವರ್ಗದ ದಿನೇಶ್, ಪರಿಶಿಷ್ಟ ವಿಭಾಗದ ಕೃಷ್ಣಪ್ಪ, ಕೃಷಿ ಘಟಕದ ಪ್ರದೀಪ್, ಸ್ಥಾನೀಯ ಸಮಿತಿ ಮುಖಂಡ ಸುರೇಶ್ ಮತ್ತಿತರರು ಹಾಜರಿದ್ದರು.