ಸೋಮವಾರಪೇಟೆ, ಅ. 2: ಕೃಷಿ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಕೂಡಿಗೆಯ ಬಿ.ಎ. ತಿಮ್ಮಪ್ಪ ಇವರನ್ನು ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ್‍ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂಘದ ಕಾರ್ಯದರ್ಶಿ ಬಿ.ಕೆ. ಗೋಪಾಲ್, ನಿರ್ದೇಶಕರುಗಳಾದ ಕೂಡಿಗೆ ದಯಾನಂದ್, ಚಂದ್ರಶೇಖರ್, ಚಂದ್ರು, ರವಿ, ಮಾಜಿ ಅಧ್ಯಕ್ಷ ರಾಮು ಸೇರಿದಂತೆ ಇತರರು ಪಾಲ್ಗೊಂಡಿದ್ದರು.