ನಾಪೆÇೀಕ್ಲು, ಅ. 2: ನಾಪೆÇೀಕ್ಲು ಪಟ್ಟಣದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಟೋ ರಿಕ್ಷಾ ನಿಲುಗಡೆಗೆ ಗ್ರಾಮ ಪಂಚಾಯಿತಿ ನೀಡಿದ 100 ಮೀ. ಜಾಗದ ಬದಲಿಗೆ 150 ಮೀ. ಜಾಗವನ್ನು ನೀಡಬೇಕು ಎಂದು ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮೊದಲು ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ರಜಾಕ್, ಇಕ್ಕಟ್ಟಾದ ರಸ್ತೆ, ವಾಹನ ದಟ್ಟಣೆಯಿಂದ ಆಟೋ ಚಾಲಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆಟೋ ರಿಕ್ಷಾ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವು ಆಟೋ ರಿಕ್ಷಾ ಚಾಲಕರು ನಿಲ್ದಾಣದಲ್ಲಿ ತಮ್ಮ ಆಟೋ ನಿಲ್ಲಿಸದೇ ಪಟ್ಟಣದಲ್ಲಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಪೆÇಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ನಾಪೆÇೀಕ್ಲು ಠಾಣಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಎಂ.ಸಿ. ನಾಗರಾಜ್, ಕಾರ್ಯದರ್ಶಿ ಜಕ್ರಿಯಾ, ಸದಸ್ಯರಾದ ಕೆ. ಎಂ. ರಮೇಶ್, ಪಿ.ವಿ. ಪ್ರಭಾಕರ್ ಇದ್ದರು.