ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡಾ ಒಂದು. ಉದರದಲ್ಲಿ ಯಾವುದೇ ಸಮಸ್ಯೆ ಕಂಡುಬರಬಹುದು. ಆದ್ರೆ ಇದನ್ನೇ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹೇಳುವುದು ಸರಿಯಲ್ಲ. ಗ್ರೀಕ್ ಭಾಷೆಯಲ್ಲಿ ಗ್ಯಾಸ್ಟರ್ ಎಂದರೆ ಜಠರ. ಗ್ಯಾಸ್ಟ್ರಿಕ್ ಎಂದರೆ ಜಠರದ ಎಂದು ಹೇಳಲಾಗುತ್ತದೆ. ಜಠರದ ಅಲ್ಸರ್ ರೋಗಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಹಸಿವಾಗದಿರುವುದು, ಹೊಟ್ಟೆ ಉಬ್ಬರಿಸುವಿಕೆ, ತೇಗು ಬರುವುದು.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ ?: ಉದರದ ಸಮಸ್ಯೆಗಳು ಕಾಣಿಸಿ ಕೊಂಡಾಗಲೆಲ್ಲಾ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಪರಿಹಾರ ಸಾಧ್ಯವಾಗದೇ ಇರಬಹುದು. ಪಿತ್ತಕೋಶದ ಕಲ್ಲು, ಕರುಳಿನ ಹುಣ್ಣು ಇತ್ಯಾದಿ. ಉದರ ರೋಗ ಕಾಣಿಸಿಕೊಂಡಾಗ ನಿರ್ಲಕ್ಷ್ಯವಹಿಸದೇ, ವೈದ್ಯರನ್ನು ಕಾಣಬೇಕು. ತಜ್ಞರ ಸಲಹೆ ಪಡೆಯಬೇಕು. ಸಾಕಷ್ಟು ದಿನಗಳಿಂದ ಉದರ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳಿಗೆ ಎಂಡೋಸ್ಕೋಪಿ, ಸಿ.ಟಿ. ಸ್ಕ್ಯಾನ್, ಇತ್ಯಾದಿ ತಪಾಸಣೆ ಮಾಡಿಸಬಹುದು. ಇನ್ನು ಯಾವುದೇ ತಪಾಸಣೆಯಲ್ಲಿಯೂ ಯಾವುದೇ ರೋಗ ಕಂಡು ಬಾರದಿದ್ದಾಗ ಇಂತಹ ರೋಗಿಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಎಂದೂ ಹೇಳುವರು. ಆಹಾರದಲ್ಲಿ ಮೊಸರನ್ನ ಹಾಗೂ ಮಜ್ಜಿಗೆಯನ್ನು ಬಳಸುವುದರಿಂದ ಜೀಣಾರ್ಂಗದ ಆರೋಗ್ಯಕ್ಕೆ ಉತ್ತಮವಾದದ್ದು, ಭಾರತೀಯ ಸಂಸ್ಕøತಿಯಲ್ಲಿ ಊಟದ ನಂತರ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸುತ್ತಾರೆ. ಇನ್ನು ಪ್ರಕೃತಿದತ್ತವಾದ ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳು ಜೀಣಾರ್ಂಗದ ಸಮಸ್ಯೆಯನ್ನು ನಿವಾರಿಸಲು ಸಹಕರಿಸುತ್ತದೆ.

ಕೆಲ ಸಂದರ್ಭಗಳಲ್ಲಿ ಎದೆ ಉರಿ ಬಂದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಂದೇ ಬಿಟ್ಟಿತೇನೋ ಎಂಬಂತೆ ಚಿಂತಿಸುತ್ತೇವೆ. ಇದು ತಪ್ಪು ಕಲ್ಪನೆ. ಇದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಜೀಣಾರ್ಂಗ ಪ್ರಕ್ರಿಯೆಗೆ ಅಗತ್ಯವಾದ ಪ್ರಮಾಣಕ್ಕಿಂತ ಗ್ಯಾಸ್ಟ್ರಿಕ್ ಗ್ರಂಥಿಗಳು ಹೆಚ್ಚಿನ ಪ್ರಮಾಣದ ಆಮ್ಲವನ್ನು ಉತ್ಪಾದಿಸಿದಾಗಲೂ ಎದೆಉರಿ ಬರುತ್ತದೆ. ಕೊಬ್ಬು ಇರುವ ಆಹಾರ, ಮಸಾಲೆಯುಕ್ತ ಆಹಾರ ಸೇವನೆ, ಬೊಜ್ಜು, ಗರ್ಭದಾರಣೆ, ಈರುಳ್ಳಿ. ಕೊಬ್ಬಿನ ಅಥವಾ ಹುರಿದ ಆಹಾರದ ಸೇವನೆ, ಧೂಮಪಾನ ತ್ಯಜಿಸಬೇಕು. ಕಾರ್ಬೋನೇಟೆಡ್ ಪಾನಿಯಗಳ ಸೇವನೆ ಸಂದರ್ಭದಲ್ಲಿ ಎದೆ ಉರಿ ಕಾಣಿಸಿಕೊಳ್ಳಬಹುದು. ರಾತ್ರಿ ಕೊತ್ತಂಬರಿ ಹಾಗೂ ಮೆಂತ್ಯೆಯನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು ನಿವಾರಣೆಯಾಗುತ್ತದೆ.

ಗ್ಯಾಸ್ಟ್ರಿಕ್ ಇರುವವರು ಉಪ್ಪಿನಕಾಯಿ ತಿನ್ನದಿರುವುದು ಒಳ್ಳೆಯದು. ಊಟವಾದ ಕೂಡಲೇ ಭಾರ ಎತ್ತುವುದು ಹಾಗೂ ಮಲಗುವುದು ಮಾಡ ಬಾರದು. ನೀರು, ಎಳೆನೀರನ್ನು ಯಥೇಚ್ಛವಾಗಿ ಸೇವಿಸಬೇಕು. ಕರಿದ, ಕರಕಲು ತಿಂಡಿಗಳನ್ನು, ಸೋಡಾ ಮುಂತಾದವುಗಳನ್ನು ಆಹಾರದಲ್ಲಿ ಕಡಿಮೆ ಮಾಡಿ.

(ಸಂಗ್ರಹ) - ಪುತ್ತರಿರ ಪಪ್ಪು ತಿಮ್ಮಯ್ಯ