ಮಡಿಕೇರಿ, ಅ. 1: ಮಕ್ಕಳ ಕೊರತೆಯಿಂದ ಮೂರು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಮದೆ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರಾರಂಭಿಸಲು ದೊರೆತ ಅನುಮತಿಯಂತೆ ಇದಕ್ಕೆ ಕಾಯಕಲ್ಪ ನೀಡಲಾಗಿದೆ. ಈ ಶಾಲೆಯನ್ನು ಪ್ರಾರಂಭಿಸಲು ಗ್ರಾಮಸ್ಥರು ಹಾಗೂ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಅವರು ಪ್ರಯತ್ನ ನಡೆಸಿದ್ದು, ಇದೀಗ ಯಶಸ್ಸು ಕಂಡಿದೆ.
ಇಂದು ಶಾಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ಉದ್ಘಾಟಿಸಿದರು. ಈ ಸಂದರ್ಭ ರವಿ ಚಂಗಪ್ಪ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು, ಮದೆ ಗ್ರಾ.ಪಂ. ನವರು ಪಾಲ್ಗೊಂಡಿದ್ದರು.