ಮಡಿಕೇರಿ, ಅ.1: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ತಾ.2 ರಿಂದ (ಇಂದಿನಿಂದ) ನವೆಂಬರ್ 15 ರವರೆಗೆ ಜಾನುವಾರುಗಳಿಗೆ 1 ನೇ ಸುತ್ತಿನ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯ ರೈತ ಬಾಂಧವರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ್ ಭಟ್ ಅವರು ತಿಳಿಸಿದ್ದಾರೆ.

ವಿವರ ಇಂತಿದೆ: ತಾ. 2 ರಂದು (ಇಂದು) ಮಡಿಕೇರಿ ತಾಲೂಕಿನ ಮಡಿಕೇರಿ ನಗರ ಬ್ಲಾಕ್ 1 ರಿಂದ 24, ಕರಿಕೆ, ಹೊದ್ದೂರು. ವೀರಾಜಪೇಟೆ ತಾಲೂಕಿನ ಅರ್ಜಿ, ಬಾಳುಗೋಡು, ಕುಟ್ಟ, ಧನುಗಾಲ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಕುಂಬೂರು, ಊರುಗುತ್ತಿ ಮತ್ತು ನೇರುಗಳಲೆ. ತಾ. 3 ರಂದು ಮಡಿಕೇರಿ ತಾಲೂಕಿನ ಕರ್ಣಂಗೇರಿ, ಕರಿಕೆ ಹೊದ್ದೂರು. ವೀರಾಜಪೇಟೆ ತಾಲೂಕಿನ ಆರ್ಜಿ, ಬಿಟ್ಟಂಗಾಲ, ಕೆ. ಬಾಡಗ, ಧನುಗಾಲ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಮೂವತ್ತೋಕ್ಲು, ಊರುಗುತ್ತಿ ಬ್ಯಾಡಗೊಟ್ಟ, ನೇರುಗಳಲೆ. ತಾ.4 ರಂದು ಮಡಿಕೇರಿ ತಾಲೂಕಿನ ಕಳಕೇರಿ ನಿಡುಗಣೆ, ತಣ್ಣಿಮಾನಿ, ಹೊದ್ದೂರು. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಮೂವತ್ತೋಕ್ಲು, ಬೆಂಬಳೂರು, ನೇರುಗಳಲೆ.

ತಾ.5 ರಂದು ಮಡಿಕೇರಿ ತಾಲೂಕಿನ ಕಾಲೂರು, ಬಾರಿಬೆಳ್ಳಚ್ಚು, ನಿಡುವಟ್ಟು, ಹಚ್ಚಿನಾಡು, ಮುಟ್ಲು, ತಣ್ಣಿಮಾನಿ, ಮುತ್ತಾರ್ಮುಡಿ. ವೀರಾಜಪೇಟೆ ತಾಲೂಕಿನ ಆರ್ಜಿ, ನಾಂಗಾಲ, ನಾಲ್ಕೇರಿ, ಮಾಯಮುಡಿ. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಕಾಂಡನಕೊಲ್ಲಿ, ಬೆಂಬಳೂರು, ಶಿವರಳ್ಳಿ, ಯಲಕನೂರು. ತಾ.6 ರಂದು ಮಡಿಕೇರಿ ತಾಲೂಕಿನ ಕಾಲೂರು, ದೇವಸ್ತೂರು, ಭಾಗಮಂಡಲ, ತಾವೂರು, ಮುತ್ತಾರ್ಮುಡಿ. ವೀರಾಜಪೇಟೆ ತಾಲೂಕಿನ ಆರ್ಜಿ, ಕೋಟ್ಟೋಳ್ಳಿ, ನಾಲ್ಕೇರಿ ಅರಣ್ಯ, ಮಂಚಳ್ಳಿ ಅರಣ್ಯ, ಕಾನೂರು. ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಗರಗಂದೂರು, ಕೊಡ್ಲೂರು, ಯಲಕನೂರು.

ತಾ.7 ರಂದು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ, ಭಾಗಮಂಡಲ, ತಾವೂರು ಕುಂಬಳದಾಳು. ವೀರಾಜಪೇಟೆ ತಾಲೂಕಿನ ಹೆಗ್ಗಳ, ಕೆದಮುಳ್ಳೂರು, ಕುರ್ಚಿ, ಬೆಕ್ಕೆಸೊಡ್ಲೂರು. ಸೋಮವಾರಪೇಟೆ ತಾಲೂಕಿನ ಅತ್ತೂರು ಅರಣ್ಯ, ಗರಗಂದೂರು, ಕೂಡ್ಲೂರು, ಕೆರೆಕೇರಿ, ಯಲಕನೂರು. ತಾ.8 ರಂದು ಮಡಿಕೇರಿ ತಾಲೂಕಿನ ಗಾಳಿಬೀಡು, ಚೇರಂಗಾಲ, ಕುಂಬಳದಾಳು. ವೀರಾಜಪೇಟೆ ತಾಲೂಕಿನ ಹೆಗ್ಗಳ, ಕೆದಮುಳ್ಳೂರು, ಕುಮಟೂರು, ಕೋತೂರು. ಸೋಮವಾರಪೇಟೆ ತಾಲೂಕಿನ ಅತ್ತೂರು ಅರಣ್ಯ, ತಾಕೇರಿ, ಹೊನ್ನೆಕೊಡಿ, ದೊಡ್ಡ ಭಂಡಾರ, ನೇರ್ಗಳೆ ಕರ್ಕಳ್ಳಿ. ತಾ.9 ರಂದು ಮಡಿಕೇರಿ ತಾಲೂಕಿನ ಗಾಳಿಬೀಡು, ಕೋರಂಗಾಲ, ಕಾಂತೂರು ಮೂರ್ನಾಡು. ವೀರಾಜಪೇಟೆ ತಾಲೂಕಿನ ಬೇಟೋಳಿ, ಪಾಲಂಗಾಲ, ನೆಮ್ಮಲೆ ಈಸ್ಟ್ ಮತ್ತು ವೆಸ್ಟ್, ನೋಕ್ಯ. ಸೋಮವಾರಪೇಟೆ ತಾಲೂಕಿನ ಮರೂರು, ಕಿರಗಂದೂರು, ದೊಡ್ಡ ಭಂಡಾರ, ಕೊರ್ಗಲ್ಲು, ನೇರ್ಗಳೆ ಕರ್ಕಳ್ಳಿ. ತಾ.10 ರಂದು ಮಡಿಕೇರಿ ತಾಲೂಕಿನ 1ನೇ ಮೊಣ್ಣಂಗೇರಿ, ಕುಂದಚೇರಿ, ಎಂ.ಬಾಡಗ. ಸೋಮವಾರಪೇಟೆ ತಾಲೂಕಿನ ಮರೂರು, ಬಿಳಿಗೇರಿ, ನೀರುಗುಂದ, ಮಸಗೋಡು.

ತಾ.11 ರಂದು ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ, ಕುಂದಚೇರಿ, ಕಿಗ್ಗಾಲು. ಸೋಮವಾರಪೇಟೆ ತಾಲೂಕಿನ ಮರೂರು, ಬಿಳಿಗೇರಿ, ಕಟ್ಟೆಪುರ, ಕಟ್ಟೆಪುರ ಅರಣ್ಯ, ಗೋಣಿಮಾರೂರು. ತಾ.12 ರಂದು ಮಡಿಕೇರಿ ತಾಲೂಕಿನ ಮಕ್ಕಂದೂರು, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಕಿಗ್ಗಾಲು. ವೀರಾಜಪೇಟೆ ತಾಲೂಕಿನ ಬೇಟೊಳ್ಳಿ, ಗುಹ್ಯ, ಟಿ.ಶೆಟ್ಟಿಗೇರಿ, ನೋಕ್ಯ, ದೇªಮಚ್ಚಿ. ಸೋಮವಾರಪೇಟೆ ತಾಲೂಕಿನ ಯಡವನಾಡು, ಐಗೂರು, ಗೋಣಿಮರೂರು, ನಿಲುವಾಗಿಲು. ತಾ.13 ರಂದು ಮಡಿಕೇರಿ ತಾಲೂಕಿನ ಮುಕ್ಕೋಡ್ಲು, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಹಾಕತ್ತೂರು. ವೀರಾಜಪೇಟೆ ತಾಲೂಕಿನ ಬೇಟೊಳ್ಳಿ, ಸಿದ್ದಾಪುರ, ಕರಡಿಗೋಡು, ಹರಿಹರ, ಅರಕೇರಿ ಅರಣ್ಯ-1 ಅರಕೇರಿ ಅರಣ್ಯ-2. ಸೋಮವಾರಪೇಟೆ ತಾಲೂಕಿನ ಯಡವನಾಡು, ಗಡಿನಾಡು ಅರಣ್ಯ, ಆಗಲಿ, ಕೋಣಿಗಾನ ಹಳ್ಳಿ, ಬೆಸ್ಸೂರು, ಗೋಣಿಮಾರೂರು. ತಾ.14 ರಂದು ಮಡಿಕೇರಿ ತಾಲೂಕಿನ ಹಮ್ಮಿಯಾಲ, ಅಯ್ಯಂಗೇರಿ, ಹಾಕತ್ತೂರು. ವೀರಾಜಪೇಟೆ ತಾಲೂಕಿನ ಬೇಟೊಳ್ಳಿ, ಕರಡಿಗೋಡು, ತೆರಾಲು, ಹೆಬ್ಬಾಲೆ. ಸೋಮವಾರಪೇಟೆ ತಾಲೂಕಿನ ಯಡವನಾಡು ಅರಣ್ಯ, ಬೆಂಡೆಬೆಟ್ಟ ಅರಣ್ಯ, ಶಿರಂಗಳ್ಳಿ, ಗೋಣಿಮರೂರು, ಜನಾರ್ಧನ ಹಳ್ಳಿಯಲ್ಲಿ ನಡೆಯಲಿದೆ.