ನವದೆಹಲಿ, ಸೆ. 30: ಅಕ್ಟೋಬರ್ 15 ರಿಂದ ಸಿನಿಮಾ ಹಾಲ್‍ಗಳು, ಮಲ್ಟಿಪ್ಲೆಕ್ಸ್‍ಗಳು, ಎಕ್ಸಿಬಿಷನ್ ಹಾಲ್‍ಗಳು ಮತ್ತು ಮನರಂಜನಾ ಪಾರ್ಕ್‍ಗಳು ತಮ್ಮ ಆಸನ ಸಾಮಥ್ರ್ಯದ ಶೇಕಡಾ 50ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.ಕೇಂದ್ರ ಸರ್ಕಾರ ಇಂದು ಅನ್‍ಲಾಕ್ 5 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅನ್‍ಲಾಕ್ 5ರ ಮಾರ್ಗಸೂಚಿಗಳ ಅನ್‍ಲಾಕ್ 5 ಮಾರ್ಗಸೂಚಿ ಪ್ರಕಟ(ಮೊದಲ ಪುಟದಿಂದ) ಅನುಸಾರ ಅಕ್ಟೋಬರ್ 15 ರಿಂದ ಶಾಲೆ, ಕಾಲೇಜುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದೆ. ಆದರೆ ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳು ಮತ್ತು ಆಯಾ ಸಂಸ್ಥೆಗಳಿಗೆ ಬಿಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ, ಕ್ರೀಡಾಪಟುಗಳ ತರಬೇತಿಗಾಗಿ ಬಳಸಲಾಗುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗುವುದು, ಇದಕ್ಕಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸುತ್ತದೆ.

ಬೇಕರಿ ತಿನಿಸುಗಳಿಗೆ ಗಡುವು

ಇನ್ನು ಮುಂದೆ ಬೇಕರಿ ತಿನಿಸುಗಳ ತಯಾರಿಕಾ ದಿನ ಹಾಗೂ ಉಪಯೋಗಗಳ ಅವಧಿಯನ್ನು ಕಡ್ಡಾಯ ಮಾಡಿದೆ.

ಬೆಸ್ಟ್ ಬಿಫೆÇೀರ್ ಡೇಟ್ ನಮೂದಿಸುವಂತೆ ಆಹಾರ ಸುರಕ್ಷತೆ, ಸ್ಟ್ಯಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ ಆದೇಶ ನೀಡಿದೆ. ಸಿಹಿ ತಿನಿಸುಗಳ ಪ್ಯಾಕೇಟ್ ಅಷ್ಟೇ ಅಲ್ಲ. ಟ್ರೇಗಳ ಮೇಲೂ ದಿನಾಂಕ ಹಾಕಬೇಕು.

ಪಪ್ಸ್, ದಿಲ್ ಪಸಂದ್, ವೆರೈಟಿ ಕೇಕ್, ಕ್ರೀಮ್ ಬನ್ ಸೇರಿ ಬೇಕರಿ ತಿನಿಸಿಗೆ ಈ ಆದೇಶ ಅನ್ವಯ ಆಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.