ಮಡಿಕೇರಿ, ಸೆ. 30: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸಂಭವಿಸಿದ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಕೃಷಿ ಫಸಲು ಧಕ್ಕೆಯಾಗಿರುವ ಕುರಿತು ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇದ್ದ ಕಾಲಾವಕಾಶ ಇದೀಗ ಮುಕ್ತಾಯಗೊಂಡಿದೆ. ತೋಟಗಾರಿಕೆ, ಕೃಷಿ ಹಾಗೂ ಕಾಫಿ ಮಂಡಳಿಯ ಮೂಲಕ ನಷ್ಟ ಪರಿಹಾರದ ಕುರಿತು ಅರ್ಜಿ ಸ್ವೀಕರಿಸಲಾಗುತ್ತಿತ್ತು.

ಒಟ್ಟಾರೆಯಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕ್ರೋಢೀಕರಿಸಿ ಅವರುಗಳು ಗ್ರಾಮಲೆಕ್ಕಿಗರ ಮಟ್ಟದಲ್ಲಿ ದಾಖಲಾತಿ ಮಾಡುತ್ತಿರುವ ಪ್ರಕ್ರಿಯೆ ಇದೀಗ ನಡೆಯುತ್ತಿದೆ. ಪ್ರಸ್ತುತ 1600 ಅರ್ಜಿಗಳ ದಾಖಲಾತಿ ಮಾಡಲಾಗಿದ್ದು, ಈ ಕಾರ್ಯ ಮುಂದುವರಿಯುತ್ತಿರುವು ದಾಗಿ ಜಿಲ್ಲಾಡಳಿತ ಮೂಲಕ ತಿಳಿದು ಬಂದಿದೆ.