ಮಡಿಕೇರಿ, ಅ. 1 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 4 ಸಾವು ವರದಿಯಾಗಿದ್ದು, ಮಡಿಕೇರಿ ತಾಲೂಕು ನಿವಾಸಿ 74 ವರ್ಷದ ಪುರುಷ, ಸೋಮವಾರಪೇಟೆ ಪಟ್ಟಣದ ನಿವಾಸಿ 33 ವರ್ಷದ ಪುರುಷ, ಕುಶಾಲನಗರ ನಿವಾಸಿ 50 ವರ್ಷದ ಪುರುಷ, ಕುಶಾಲನಗರ ನಿವಾಸಿ 83 ವರ್ಷದ ಮಹಿಳೆ ಮೃತರಾಗಿದ್ದಾರೆ.

ಹೊಸದಾಗಿ 53 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2891 ಪ್ರಕರಣಗಳು ವರದಿಯಾಗಿದ್ದು, 2328 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 44 ಮಂದಿ ಸಾವನ್ನಪ್ಪಿದ್ದು, 429 ಪ್ರಕರಣಗಳು ಸಕ್ರಿಯವಾಗಿವೆÉ. ಸೋಂಕಿತರ ಪೈಕಿ 102 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 62 ಮಂದಿ ಕೊರೊನಾ ಕೇರ್ ಎಂಟರ್‍ನಲ್ಲಿ ಹಾಗೂ 265 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 395 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ವಾಲ್ನೂರು ತ್ಯಾಗತ್ತೂರು ಮುತ್ತಪ್ಪ ದೇವಾಲಯ ಸಮೀಪದ 44 ವರ್ಷದ ಪುರುಷ, ಮಡಿಕೇರಿ ಮರಗೋಡು ಅಂಚೆಯ ಹೊಸ್ಕೇರಿ ಬೆಟ್ಟದ 34 ವರ್ಷದ ಪುರುಷ, ನೆಲ್ಲಿಹುದಿಕೇರಿ ಶಾಲೆ ರಸ್ತೆಯ 30 ವರ್ಷದ ಮಹಿಳೆ ಮತ್ತು 66 ವರ್ಷದ ಪುರುಷ, ನೆಲ್ಲಿಹುದಿಕೇರಿ ಎಂಜಿ ಕಾಲೋನಿ ಅಂಗನವಾಡಿ ಸಮೀಪದ 50 ವರ್ಷದ ಪುರುಷ, ಮರಗೋಡಿನ ಅರೆಕಾಡು ಗ್ರಾಮದ 46 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಮುತ್ತಪ್ಪ ದೇವಾಲಯ ಸಮೀಪದ 57 ವರ್ಷದ ಮಹಿಳೆ, ಪಾಲಿಬೆಟ್ಟ ಟಾಟಾ ಎಸ್ಟೇಟ್‍ನ 55 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆ ಪೆÇಲೀಸ್ ವಸತಿಗೃಹದ 32 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆ ಜನತಾ ಕಾಲೋನಿಯ 24 ವರ್ಷದ ಮಹಿಳೆ, ಭಾಗಮಂಡಲ ಎ.ಎನ್.ಎಫ್ ಕ್ಯಾಂಪ್‍ನ 24 ವರ್ಷದ ಪುರುಷ, ಕುಶಾಲನಗರ ಮಾರುತಿ ಬಡಾವಣೆ ಗೌಡ ಸಮಾಜ ಸಮೀಪದ 50 ವರ್ಷದ ಪುರುಷ, ಕುಶಾಲನಗರ ಗೌಡ ಸಮಾಜ ಹಿಂಭಾಗದ 80 ವರ್ಷದ ಪುರುಷ, ಸೋಮವಾರಪೇಟೆ ಕಲ್ಕಂದೂರು ಗ್ರಾಮದ 33 ವರ್ಷದ ಪುರುಷ, ಕುಶಾಲನಗರ ಕರಿಯಪ್ಪ ಬಡಾವಣೆಯ 23 ವರ್ಷದ ಮಹಿಳೆ, 53 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ, ಶಿರಂಗಾಲ ಪೆಟ್ರೋಲ್ ಪಂಪ್ ಸಮೀಪದ 45 ವರ್ಷದ ಮಹಿಳೆ, ಕುಶಾಲನಗರ ಓಂಕಾರ್ ಬಡಾವಣೆಯ 68 ವರ್ಷದ ಮಹಿಳೆ, ಗುಡ್ಡೆಹೊಸೂರುವಿನ ಹಾಲು ಡೈರಿ ಸಮೀಪದ 38 ವರ್ಷದ ಪುರುಷ, ನೆಲ್ಲಿಹುದಿಕೇರಿ ಎಂಜಿ ಕಾಲೋನಿಯ 52 ವರ್ಷದ ಪುರುಷ, 30 ವರ್ಷದ ಮಹಿಳೆ, 56 ಮತ್ತು 39 ವರ್ಷದ ಪುರುಷರು, ಕೊಡ್ಲಿಪೇಟೆಯ ನಂದಿಪುರದ 40 ವರ್ಷದ ಪುರುಷ, ಸೋಮವಾರಪೇಟೆ ಜನತಾ ಕಾಲೋನಿಯ 74 ವರ್ಷದ ಪುರುಷ, ಸೋಮವಾರಪೇಟೆ ಜೂನಿಯರ್ ಕಾಲೇಜು ರಸ್ತೆಯ 33 ವರ್ಷದ ಪುರುಷ, ಶನಿವಾರಸಂತೆ ತ್ಯಾಗರಾಜ ಕಾಲೋನಿಯ 28 ವರ್ಷದ ಮಹಿಳೆ, ಶಿರಂಗಾಲ ಪಿ.ಎಚ್.ಸಿ ಸಮೀಪದ 50 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಸಮೀಪದ ಪೆÇಲೀಸ್ ವಸತಿಗೃಹದ 43 ವರ್ಷದ ಪುರುಷ, ವೀರಾಜಪೇಟೆ ಟಿ.ಶೆಟ್ಟಿಗೇರಿ ಶಾಲೆ ಸಮೀಪದ 74 ವರ್ಷದ ಪುರುಷ, ವೀರಾಜಪೇಟೆ ಕೆದಮುಳ್ಳೂರು ಗ್ರಾಮ ಮತ್ತು ಅಂಚೆಯ 64 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ, ಸೋಮವಾರಪೇಟೆ ಗರಗಂದೂರು ಪಂಚಾಯಿತಿ ಸಮೀಪದ 21 ವರ್ಷದ ಮಹಿಳೆ, ಸೋಮವಾರಪೇಟೆ ಗೌಡಳ್ಳಿ ಗ್ರಾಮದ ಜಿಎಂಪಿ ಶಾಲೆ ಸಮೀಪದ 84 ವರ್ಷದ ಪುರುಷ, ದೇಚೂರು ವಿದ್ಯಾಗಣಪತಿ ದೇವಾಲಯ ಸಮೀಪದ 23 ವರ್ಷದ ಮಹಿಳೆ, ಕೊಡ್ಲಿಪೇಟೆ ಗ್ರಾಮದ 26 ವರ್ಷದ ಪುರುಷ, ಬಲ್ಲಮಾವಟಿ ಗ್ರಾಮದ 59 ವರ್ಷದ ಪುರುಷ, ಮೇಕೇರಿಯ ಕಾವೇರಿ ಲೇಔಟ್‍ನ 53 ವರ್ಷದ ಪುರುಷ, ಮರಗೋಡು ಕಟ್ಟೆಮಾಡು ಗ್ರಾಮದ 64 ವರ್ಷದ ಪುರುಷ, ವೀರಾಜಪೇಟೆ ಅಂಬಟ್ಟಿ ಗ್ರಾಮದ 52 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 23 ವರ್ಷದ ಮಹಿಳೆ, ನಾಪೆÇೀಕ್ಲು ಇಂದಿರಾನಗರ ಅಂಗನವಾಡಿ ಸಮೀಪದ 46 ವರ್ಷದ ಮಹಿಳೆ, ನಾಪೆÇೀಕ್ಲು ಇಂದಿರಾನಗರ ಅಂಗನವಾಡಿ ಸಮೀಪದ 57 ಮತ್ತು 40 ವರ್ಷದ ಮಹಿಳೆ, ಚೆಯ್ಯಂಡಾಣೆ ನರಿಯಂದಡ ಗ್ರಾಮದ 44 ವರ್ಷದ ಪುರುಷ, ನಾಪೆÇೀಕ್ಲು ಹಳೆತಾಲೂಕುವಿನ 44 ವರ್ಷದ ಮಹಿಳೆ, ಕುಶಾಲನಗರ ಮಾರುತಿ ಬಡಾವಣೆ ಜನತಾ ಕಾಲೋನಿಯ 24 ವರ್ಷದ ಮಹಿಳೆ, 2 ವರ್ಷದ ಬಾಲಕ, 60 ಮತ್ತು 21 ವರ್ಷದ ಪುರುಷರು, ಕುಶಾಲನಗರ ಬಿಎಂ ರಸ್ತೆಯ ಮಹಾಲಕ್ಷ್ಮಿ ಸ್ವೀಟ್ಸ್ ಸಮೀಪದ 78 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.