ಚೆಟ್ಪಳ್ಳಿ: ಪಂಡಿತ್ ದೀನ್ ದಯಾಳ್ ಉಪಾದ್ಯಾಯರವರ ಹುಟ್ಟು ಹಬ್ಬವನ್ನು ಚೆಟ್ಟಳ್ಳಿ ವಾರ್ಡ್‍ನ ಭಾರತೀಯ ಜನತಾ ಪಕ್ಷದ ವತಿಯಿಂದ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಆಚರಿಸ ಲಾಯಿತು. ಚೆಟ್ಟಳ್ಳಿ ವಾರ್ಡ್ ಅಧ್ಯಕ್ಷ ಕಡ್ಯದ ಉದಯ, ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಮೇರಿ ಅಂಬುದಾಸ್, ಚೆಟ್ಪಳ್ಳಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲಾಶ್ರೀ, ಕಾರ್ಯಕರ್ತರಾದ ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಗಿರೀಶ್ ಬಿದ್ದಪ್ಪ, ಅಂಬುದಾಸ್, ಬಟ್ಟೀರ ಕರಣ್ ಮುತ್ತಣ್ಣ, ಸುನಿಲ್ ಹಾಜರಿದ್ದರು. ಕೂಡಿಗೆ: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವತ್ತೂರು ಗ್ರಾಮ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ದೀನ್ ದಯಾಳ್ ಉಪಾಧ್ಯಾಯನವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಮಾಜಿ ಮಹಿಳಾ ಮೋರ್ಚಾದ ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ರಾಜನ್ ಬಸವತ್ತೂರು ಬೂತ್ ಅಧ್ಯಕ್ಷ ಆರ್ ಕೃಷ್ಣ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದರು. ಕೂಡಿಗೆ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮವು ಕೂಡುಮಂಗಳೂರು ಸಮುದಾಯ ಭವನದ ಆವರಣದಲ್ಲಿ ನಡೆಯಿತು. ಬಿಜೆಪಿ ಕೂಡುಮಂಗಳೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕೆ ಜಿ ಮಂಜುನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದೀನ್ ದಯಾಳ್ ಉಪಾಧ್ಯಾಯರ ಬಗ್ಗೆ ತಾಲೂಕು ಬಿಜೆಪಿ ಕಾರ್ಯದರ್ಶಿಗಳಾದ ಇಂದಿರಾ ರಮೇಶ್ ಅವರು ಕಿರುಪರಿಚಯವನ್ನು ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಣಿ ಪ್ರಸಾದ್ ಹಾಗೂ ಬಿಜೆಪಿ ಮುಖಂಡರಾದ ಎಂಬಿ ಜಯಂತ್ ಹಾಗೂ ಸಹಕಾರ ಸಂಘದ. ಮಾಜಿ ಅಧ್ಯಕ್ಷ ಕೆ. ಕೆ. ಭೋಗಪ್ಪ ಅವರು ಯುವ ಮುಖಂಡ ಚಂದ್ರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಯನ್ನು ಪ್ರಶಾಂತ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಭಾಸ್ಕರ್ ನಾಯಕ್, ಎಸ್. ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಕುಮಾರಸ್ವಾಮಿ, ಎಸ್ ಸಿ ಮೋರ್ಚಾ ಕೊಡಗು ಉಸ್ತುವಾರಿ ವರದರಾಜ ದಾಸ್, ಕೂಡಿಗೆ ಗ್ರಾಮ ಪಂಚಾಯತ್ ಮಾಜಿ ಉಪ ಅಧ್ಯಕ್ಷ ಗಿರೀಶ್ ಕುಮಾರ್, ಕೃಷಿ ಮೋರ್ಚಾ ಪ್ರಮುಖ ಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ, ಪ್ರಮೀಳಾ, ಸವಿತಾ, ಓಬಿಸಿ ಮೋರ್ಚಾ ಪಾಂಡುರಂಗ, ಹಿರಿಯ ಮುಖಂಡರಾದ ಬಸವನತ್ತೂರು ಬೂತ್ ಅಧ್ಯಕ್ಷ ಕೃಷ್ಣ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಹಾಜರಿದ್ದರು.ಮಕ್ಕಂದೂರು : ಭಾರತೀಯ ಜನತಾ ಪಾರ್ಟಿ ಮಡಿಕೇರಿ ಗ್ರಾಮಾಂತರ ಮಂಡಲದ ವತಿಯಿಂದ ಇಂದು ಮಕ್ಕಂದೂರಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ಪಿ. ಕಾಂಗೀರ ಸತೀಶ್ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಾಪಂಡ ರವಿ ಕಾಳಪ್ಪ, ಜಿ.ಪಂ.ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ದೀನ್ ದಯಾಳ್ ಉಪಾಧ್ಯಾಯರ ಜೀವನ ಮತ್ತು ವಿಚಾರದ ಕುರಿತು ಧನಂಜಯ್ ಅಗೋಳಿಕಜೆ ಮಾತನಾಡಿದರು. ಸಭೆಯಲ್ಲಿ ಮಡಿಕೇರಿ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕೋಡಿರ ಪ್ರಸನ್ನ, ಡೀನ್ ಬೋಪಣ್ಣ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷ ಬಡುವಂಡ್ರ ಕವಿತಾ. ತಾ.ಪಂ. ಸದಸ್ಯರಾದ ತುಮ್ತಜೀರ ರಶ್ಮಿ, ತಾಲೂಕು ಕಾರ್ಯದರ್ಶಿ ಗಿರೀಶ್ ಮಡಿಕೇರಿ ಎಪಿಎಂಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ತಾಲೂಕು ಎಸ್ಸಿ ಮೋರ್ಚಾದ ಅಧ್ಯಕ್ಷರು ಮಕ್ಕಂದೂರಿನ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಹಾಜರಿದ್ದರು

ಸೋಮವಾರಪೇಟೆ : ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಟ್ಟಣದ ಬಿಜೆಪಿ ಕಚೇರಿ ಹಾಗೂ ಐಗೂರು ಸ್ಥಾನೀಯ ಸಮಿತಿ ವತಿಯಿಂದ ಐಗೂರಿನಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಯಿತು. ಬಿಜೆಪಿ ಮಂಡಳ ಅಧ್ಯಕ್ಷ ಮನುಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ, ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಪಕ್ಷದ ಪ್ರಮುಖರಾದ ಪ್ರೇಮ್‍ನಾಥ್, ಸದಾನಂದ್, ಗೌತಮ್, ಅಶೋಕ್, ಪ್ರಸನ್ನ, ಕೊಮಾರಿ ಸತೀಶ್, ಪ್ರಕಾಶ್, ಲಲಾ ನಿರ್ವಾಣಿ, ಅಪ್ಪಯ್ಯ, ಪ್ರಜಾ ಪೂಣಚ್ಚ ಸೇರಿದಂತೆ ಇತರರು ಉಪಸ್ಥಿತರಿದ್ದರು. ಐಗೂರಿನಲ್ಲಿ: ಐಗೂರು ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ದೀನದಯಾಳ್ ಉಪಾಧ್ಯಾಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಸೇವಾ ಸಪ್ತಾಹ ನಡೆಸಲಾಯಿತು. ಐಗೂರಿನ ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಚಾಯಿತಿ ಆವರಣವನ್ನು ಶ್ರಮದಾನದ ಮೂಲಕ ಶುಚಿಗೊಳಿಸ ಲಾಯಿತು. ಈ ಸಂದರ್ಭ ತಾ.ಪಂ. ಸದಸ್ಯೆ ಸಬಿತ ಚನ್ನಕೇಶವ, ಬಿಜೆಪಿ ಮುಖಂಡರಾದ ಎಂ.ಎ. ಪ್ರಭಾಕರ್, ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಟಿ.ಆರ್. ವಿಜಯ್, ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮಂಗಲ : ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣಿಯ ಅಂಗವಾಗಿ ಕಾರ್ಯಕ್ರಮವನ್ನು ಪೆÇನ್ನಂಪೇಟೆಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧು ಕುಮಾರ್ ಮತ್ತು ಕೊಟೇರ ಕಿಶನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದೀನದಯಾಳ್ ಉಪಾಧ್ಯಾಯ ಅವರ ಬಗ್ಗೆ ಮಧು ಕುಮಾರ್ ಅವರು ಮಾಹಿತಿ ನೀಡಿದರು. ಕಾರ್ಯಕ್ರಮ ದಲ್ಲಿ ವಾರ್ಡ್ ಅಧ್ಯಕ್ಷರುಗಳಾದ ಎಂ.ಎ. ವಿಜು, ಕೆ.ಬಿ.ವಿನು, ಹೆಚ್.ಜಿ.ಮನು, ಮತ್ತು ಮಹಿಳಾ ಮೋರ್ಚಾದ ಅಧ್ಯಕ್ಷ ಮಾಂಗೇರ ಡೈನಾ, ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ, ಉಪಾಧ್ಯಕ್ಷೆ ಗೀತಾ, ಓಬಿಸಿ ಅಧ್ಯಕ್ಷರಾದ ಎಂ.ಎಂ. ಉಮೇಶ್ (ಲೀಮ) ಪ್ರಧಾನ ಕಾರ್ಯದರ್ಶಿ ರಕ್ಷಿತ್, ಕೃಷಿ ಮೋರ್ಚಾ ಅಧ್ಯಕ್ಷ ನಿಲನ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಮೂಕಳೇರ ದಿಲ್ ಕುಮಾರ್, ಎಸ್‍ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಹೆಚ್.ಪಿ. ರಮೇಶ್, ಯುವ ಮೊರ್ಚಾದ ಅಧ್ಯಕ್ಷ ವಚನ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಜಿಲ್ಲಾ ಸಮಿತಿಯ ಸದಸ್ಯರಾದ ರೇಖಾ ಶ್ರೀಧರ್, ತಾಲೂಕು ಸಮಿತಿಯ ಸದಸ್ಯ ಮೂಕಳೇರ ಕಾವ್ಯ ತಾಲೂಕು ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೋರಿರ ವಿನು, ತಾಲೂಕು ಓಬಿಸಿ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ಹಾಗೂ ತಾಲೂಕು ಮಹಿಳಾ ಮೋರ್ಚಾದ ಸದಸ್ಯೆ ಅಮ್ಮತ್ತಿರ ಆರತಿ, ಗಾ. ಪಂ.ಸದಸ್ಯೆ ಜಯಲಕ್ಷ್ಮೀ ಮತ್ತು ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ಹಾಜರಿದ್ದರು.