ಮಡಿಕೇರಿ, ಸೆ. 28: ಕೊಡಗು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಬೆಳಿಗ್ಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹಾಗೂ ಕುಶಾಲನಗರ ಗಡಿಯಲ್ಲಿ ಹೆದ್ದಾರಿ ತಡೆಗೆ ಮುಂದಾಗಿದ್ದ ಒಟ್ಟು 99 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಆ ಬಳಿಕ ಬಿಡುಗಡೆಗೊಳಿಸಿ ದ್ದಾರೆ. ಉಳಿದಂತೆ ಅಲ್ಲಲ್ಲಿ ಕೆಲವರು ಪ್ರತಿಭಟನೆ ನಡೆಸಿದರಾದರೂ, ಪೊಲೀಸ್ ಇಲಾಖೆಯ ಮಧ್ಯಪ್ರವೇಶ ದೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಪ್ರತಿಕ್ರಿಯೆ ವ್ಯಕ್ತಗೊಂಡಿದೆ.ದಕ್ಷಿಣ ಕೊಡಗಿನ ಕುಟ್ಟದಲ್ಲಿ ಬಂದ್‍ಗೆ ಸ್ಪಂದಿಸಿರುವ ವರ್ತಕರು ದೈನಂದಿನ ವಹಿವಾಟು ಸ್ಥಗಿತ ಗೊಳಿಸಿದ್ದು, ಕೇವಲ ಔಷಧಿ ಹಾಗೂ ಮದ್ಯದ ಅಂಗಡಿ ತೆರೆದುಕೊಂಡಿತ್ತು. ಗೋಣಿಕೊಪ್ಪಲು ವರ್ತಕರು ಒಂದು ಗಂಟೆ ಬಂದ್‍ಗೆ ಬೆಂಬಲ ಸೂಚಿಸಿದ್ದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಿಶ್ರ ಪ್ರತಿಕ್ರಿಯೆಯೊಂದಿಗೆ ಮೂರು ಖಾಸಗಿ ಬಸ್‍ಗಳ ಸಹಿತ ರಾಜ್ಯ ಸಾರಿಗೆ ಬಸ್‍ಗಳು ಹಾಗೂ ಆಟೋ ಸಹಿತ ಇತರ ವಾಹನಗಳ ಓಡಾಟವಿತ್ತು. ಜನಸಂಖ್ಯೆ ಮಾತ್ರ ವಿರಳವಾಗಿ ಗೋಚರಿಸಿತು.

ಗ್ರಾಮೀಣ ಭಾಗ ಯಥಾಸ್ಥಿತಿ: ದಕ್ಷಿಣ ಕೊಡಗಿನ ಬಿರುನಾಣಿ, ಟಿ. ಶೆಟ್ಟಿಗೇರಿ, ಹುದಿಕೇರಿ, ಶ್ರೀಮಂಗಲ, ಕಾನೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಜನಜೀವನ ಎಂದಿನಂತೆ ಗೋಚರಿಸಿತು. ಉತ್ತರ ಕೊಡಗಿನ ಗಾಳಿಬೀಡು, ಗರ್ವಾಲೆ, ಮಕ್ಕಂದೂರು, ಶಾಂತಳ್ಳಿ, ಬೆಟ್ಟದಳ್ಳಿ, ಸೇರಿದಂತೆ ಹಲವಷ್ಟು ಕಡೆಗಳಲ್ಲಿ ಜನಜೀವನ ಮಾಮೂಲಿಯಾಗಿತ್ತು. ಮಳೆ ದೂರವಾಗಿ ಬಿಸಿಲಿನ ವಾತಾವರಣ ನಡುವೆ ತೋಟ ಹಾಗೂ ಗದ್ದೆಗಳಲ್ಲಿ ಕೃಷಿ ಕಾಯಕ ಕಂಡುಬಂತು.

ಮಡಿಕೇರಿಯಲ್ಲಿ ಬಂಧನ

ಕೇಂದ್ರ ಸರಕಾರದ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆ ವಿರುದ್ಧ ಕರೆ ನೀಡಲಾಗಿದ್ದ ಬಂದ್‍ಗೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್, ಜೆಡಿಎಸ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕಾಂಗ್ರೆಸ್ ಕಿಸಾನ್ ಘಟಕ, ಎಸ್‍ಡಿಪಿಐನ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೆಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಮುಂದಾದರು. ಅಲ್ಲದೆ ರಸ್ತೆ ತಡೆ ಮಾಡಲು ಯತ್ನಿಸಿದರು.

ಈ ವೇಳೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪೊಲೀಸ್ ನಿರೀಕ್ಷಕ ಮೇದಪ್ಪ, ಬಲವಂತವಾಗಿ ಬಂದ್ ಮಾಡಿಸ ದಂತೆ, ರಸ್ತೆ ತಡೆ ನಡೆಸದಂತೆ ಮನವಿ ಮಾಡಿದರು. ಆದರೆ ಈ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸದಿದ್ದಾಗ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ‘ನಾವು ರೈತರ ಪರವಾಗಿ ನಿಂತಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ’ ಎಂದು ಹೇಳುತ್ತಾ ರಸ್ತೆ ತಡೆಗೆ ಮತ್ತೊಮ್ಮೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಎಸ್‍ಡಿಪಿಐ ಪ್ರಮುಖ ಅಮಿನ್ ಮೊಯ್ಸಿನ್, ವೆಲ್ಫೇರ್ ಪಾರ್ಟಿ ಆಫ್ ಈ ವೇಳೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪೊಲೀಸ್ ನಿರೀಕ್ಷಕ ಮೇದಪ್ಪ, ಬಲವಂತವಾಗಿ ಬಂದ್ ಮಾಡಿಸ ದಂತೆ, ರಸ್ತೆ ತಡೆ ನಡೆಸದಂತೆ ಮನವಿ ಮಾಡಿದರು. ಆದರೆ ಈ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸದಿದ್ದಾಗ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ‘ನಾವು ರೈತರ ಪರವಾಗಿ ನಿಂತಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ’ ಎಂದು ಹೇಳುತ್ತಾ ರಸ್ತೆ ತಡೆಗೆ ಮತ್ತೊಮ್ಮೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಎಸ್‍ಡಿಪಿಐ ಪ್ರಮುಖ ಅಮಿನ್ ಮೊಯ್ಸಿನ್, ವೆಲ್ಫೇರ್ ಪಾರ್ಟಿ ಆಫ್ ಷರೀಫ್, ನಗರ ಕಾರ್ಯದರ್ಶಿ ಸುನಿಲ್, ಖಜಾಂಚಿ ಡೆನ್ನಿ ಬರೋಸ್, ಕಾಂಗ್ರೆಸ್ ಕಿಸಾನ್ ಘಟಕದ ಪ್ರಮುಖ ನೆರವಂಡ ಉಮೇಶ್, ಜಿಲ್ಲಾ ಮಹಿಳಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ,

(ಮೊದಲ ಪುಟದಿಂದ) ನಗರಾಧ್ಯಕ್ಷೆ ಸುನಂದ, ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲಿಲ್ ಬಾದ್‍ಶಾ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಸೇರಿದಂತೆ ಸುಮಾರು 47 ಮಂದಿಯನ್ನು ಬಂಧಿಸಲಾಯಿತು. ಈ ಸಂದರ್ಭ ನಗರ ಠಾಣಾಧಿಕಾರಿ ಅಂತಿಮ ಇದ್ದರು.

ಬಳಿಕ ಎಸ್ಪಿ ಕಚೇರಿ ಬಳಿ ಡಿಎಆರ್ ಕಚೇರಿಗೆ ಕೊಂಡೊಯ್ಯಲಾಯಿತು. ಸಂಜೆ ಬಿಡುಗಡೆ ಮಾಡಲಾಯಿತು.

ನಾಪೆÇೀಕ್ಲುವಿನಲ್ಲಿ ಬಂದ್ ಇಲ್ಲ

ನಾಪೆÇೀಕ್ಲು ಪಟ್ಟಣ ಸೇರಿದಂತೆ ವಿವಿಧ ಸಂಘಟನೆಗಳು ಕರೆದಿದ್ದ ರಾಜ್ಯ ಬಂದ್‍ಗೆ ಯಾವದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಈ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಸರಕಾರಿ ಬಸ್, ಆಟೋರಿಕ್ಷಾ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳ ಓಡಾಟ ಎಂದಿನಂತಿತ್ತು. ಸರಕಾರಿ ಹಾಗೂ ಖಾಸಗಿ ಕಚೇರಿಗಳನ್ನು ತೆರೆಯಲಾಗಿತ್ತು. ಬಂದ್‍ನ ಹಿನ್ನೆಲೆಯಲ್ಲಿ ಸಂತೆ ದಿನವಾದ ಇಂದು ಜನ ದಟ್ಟಣೆ ವಿರಳವಾಗಿತ್ತು. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಿದ್ದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ ಬಗ್ಗೆ ಜನವಲಯದಲ್ಲಿ ಮಾತುಗಳು ಕೇಳಿಬಂತು. ಉಳಿದಂತೆ ಬಂದ್‍ನ ಪರ, ವಿರೋಧದ ಯಾವದೇ ಘಟನೆಗಳು ನಡೆಯಲಿಲ್ಲ. ಠಾಣಾಧಿಕಾರಿ ಆರ್.ಕಿರಣ್ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಸಂಪಾಜೆಯಲ್ಲಿ ಪ್ರತಿಭಟನೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಸಂಪಾಜೆ, ಚೆಂಬು ರೈತ ಸಂಘ ಹಾಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದವು. ಸಂಪಾಜೆ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್. ಸುರೇಶ್, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಮಹಿಳಾ ಘಟಕದ ಸಂಪಾಜೆ ವಲಯ ಅಧ್ಯಕ್ಷೆ ಪ್ರೀತಿಕಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.