ಕುಶಾಲನಗರ, ಸೆ. 28: ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಹೊಣೆಯೊಂದಿಗೆ ಉತ್ತಮ ಪರಿಸರ ನಿರ್ಮಾಣ ಪ್ರತಿಯೊಬ್ಬರ ಧ್ಯೇಯ ವಾಗಬೇಕಾಗಿದೆ ಎಂದು ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿ ಯಂಡ ಅಪ್ಪಣ್ಣ ಕರೆ ನೀಡಿದ್ದಾರೆ.

ವಿಶ್ವ ನದಿ ದಿನಾಚರಣೆ ಅಂಗ ವಾಗಿ ಕುಶಾಲನಗರದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಪ್ರವಾಹ ಸಂತ್ರಸ್ತರ ವೇದಿಕೆ ಆಶ್ರಯದಲ್ಲಿ ನಡೆದ ಕಾವೇರಿ ನದಿ ತಟದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಮೂಲಕ ನದಿ ಪರಿಸರದ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸಲು ಸಾಧ್ಯ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ರಾದ ಎಂ.ಎಚ್. ನಜೀರ್ ಅಹಮ್ಮದ್ ಮಾತನಾಡಿ, ಪ್ರಕೃತಿ ಯನ್ನು ಉಳಿಸಿ ಬೆಳೆಸಿದಲ್ಲಿ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಅರಣ್ಯ ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್, ನದಿ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ನುಡಿಗಳಾಡಿದರು.

ಕಾವೇರಿ ನದಿ ಸೇತುವೆ ಕೆಳಭಾಗದ ನದಿ ತಟದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಹಿರಿಯರಾದ ಎಂ.ಎಚ್. ನಜೀರ್ ಅಹಮ್ಮದ್, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ ಅವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಕುಡಾ ಸದಸ್ಯ ವಿ.ಡಿ. ಪುಂಡರೀಕಾಕ್ಷ, ಪಪಂ ಸದಸ್ಯ ಕೆ.ಜಿ. ಮನು, ಪ್ರವಾಹ ಸಂತ್ರಸ್ಥರ ವೇದಿಕೆಯ ವರದ, ಕೊಡಗನ ಹರ್ಷ, ತೋರೇರ ಉದಯಕುಮಾರ್, ಕುಲ್ಲಚ್ಚನ ಹೇಮಂತ್, ಲೋಹಿತ್, ನದಿ ಸ್ವಚ್ಚತಾ ಆಂದೋಲನ ಪ್ರಮುಖ ರಾದ ಬಿ.ಜೆ. ಅಣ್ಣಯ್ಯ ಇದ್ದರು.