ನಿಮ್ಮ ಹೃದಯವು ನಿಮಿಷಕ್ಕೆ 60-100 ಬಾರಿ ಬಡಿಯುತ್ತದೆ. ನಿಮ್ಮ ಇಡೀ ದೇಹದಲ್ಲಿ ಜೀವಂತ ರಕ್ತವಿದೆ ಎಂದು ಖಚಿತ ಪಡಿಸುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದೆ. ವಿಶ್ವ ಹೃದಯ ದಿನದ 2020ನೇ ವರ್ಷದ ಘೋಷ ವಾಕ್ಯವು USಇ ಊಇಂಖಖಿ ಖಿಔ ಃಇಂಖಿ ಎಂಬುದಾಗಿದೆ.

ಹೃದಯ ಸಂಬಂಧಿಯ ಕಾಯಿಲೆ (ಅಗಿಆ-ಅಂಖಆIಔ ಗಿಂSಅUಐಂಖ ಆISಇಂSಇ) ಎಂಬ ಪದವೂ ಹೃದಯದ ಯಾವುದೇ ಕಾಯಿಲೆ ಮೆದುಳಿನ ನಾಳಿಯ ಕಾಯಿಲೆ ಅಥವಾ ರಕ್ತ ನಾಳದ ಕಾಯಿಲೆಯನ್ನು ಸೂಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷವು 17.9 ಮಿಲಿಯನ್‍ಗಿಂತ ಹೆಚ್ಚು ಹೃದಯ ಸಂಬಂಧಿ ಕಾಯಿಲೆಯಿಂದ ಜನರು ಸಾವನ್ನಪ್ಪುತ್ತಾರೆ. ಹೃದಯ ಅಥವಾ ಮೆದುಳಿ ನಂತಹ ದೇಹದ ವಿವಿಧ ಅಂಗಗಳ ರಕ್ತ ನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಕೊರೊನರಿ ಹಾರ್ಟ್ ಡಿಸೀಸ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬ್ರೊ-ವಾಸ್ಕಾಲಾರ್ ಡಿಸೀಸ್ ಎಂದು ಕರೆಯಲ್ಪಡುವ ಲಕ್ವಾ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದವು.

ದೇಹದ ಅತಿ ಪ್ರಮುಖ ಅಂಗ ಎಂದರೆ ಅದು ಹೃದಯ, ದೇಹದ ಪ್ರತಿಯೊಂದು ಭಾಗಕ್ಕೂ ರಕ್ತ ಸಂಚಾರವನ್ನುಂಟು ಮಾಡುತ್ತದೆ. ಇಂತಹ ಹೃದಯ ವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದರೆ, ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಬೇಕು ಅಧಿಕ ರಕ್ತದೊತ್ತಡವು ಹೃದ್ರೋಗಕ್ಕೆ ಅಪಾಯಕಾರಿಯಾಗಿದೆ. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯ. ನಿಮ್ಮ ಕೊಬ್ಬು (ಅಊಔಐಇSಖಿಇಖಔಐ) ಮತ್ತು ಖಿಖIಉಐಙಅಇಖIಆಇS ಮಟ್ಟವನ್ನು ನಿಯಂತ್ರಣದಲ್ಲಿಡಿ. ಇದು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹ ಕಾಯಿಲೆಯು ಹೃದಯ ಕಾಯಿಲೆಯನ್ನು ದ್ವಿಗುಣ ಗೊಳಸುತ್ತದೆ. ಮಧುಮೇಹ ಕಾಯಿಲೆಯು ನಿರ್ಲಕ್ಷಿಸಿದರೆ ಮಧುಮೇಹದಿಂದ ಅಧಿಕ ರಕ್ತದ ಸಕ್ಕರೆ ನಿಮ್ಮ ರಕ್ತ ನಾಳ ಮತ್ತು ನಿಮ್ಮ ಹೃದಯದ ರಕ್ತ ನಾಳ ಗಳನ್ನು ನಿಯಂತ್ರಿಸುವ ನರಗಳನ್ನು ಹಾನಿ ಗೊಳಿಸುತ್ತದೆ. ಆದುದರಿಂದ, ಮಧುಮೇಹವನ್ನು ಪರೀಕ್ಷಿಸಿಕೊಳ್ಳುವುದು ಮತ್ತು ಅದನ್ನು ನಿಯಂತ್ರಣದಲ್ಲಿಡಬೇಕು. ಮದ್ಯಪಾನ ಮತ್ತು ಧೂಮಪಾನ, ಹಾಗೂ ಇತರ ತಂಬಾಕಿನ ಉತ್ಪನ್ನಗಳ ಬಳಕೆ ನಿಲ್ಲಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಗಟ್ಟಬಹುದು. ನಾವು ಧೂಮಪಾನವನ್ನು ತ್ಯಜಿಸಿದರೆ ಹೃದಯ ಅಪಾಯವು ಒಂದು ವರ್ಷದಲ್ಲಿ ಅರ್ಧಕ್ಕೆ ಇಳಿಯುತ್ತದೆ. ದಿನಕ್ಕೆ ಸುಮಾರು 30ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದರಿಂದ ಹೃದಯಾಘಾತ ಮತ್ತು ಲಕ್ವಾ ಉಂಟಾಗುವ ಅಪಾಯವನ್ನು ತಡೆಯಲು ಸಹಾಯವಾಗುತ್ತದೆ. ತೂಕ ನಿಯಂತ್ರಣ ನಿಮ್ಮ ದೇಹ ಪರಿಮಾಣ ಸೂಚಿ ಬಾಡಿ ಮಾಸ್ ಇಂಡೆಕ್ಸ್ (ಃಒI) 18.5 ರಿಂದ 24.9 ರ ನಡುವಣ ಃಒI ಆರೋಗ್ಯ ಪೂರ್ಣವಾದುದು. ಇದು ರಕ್ತದ ಒತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ.

ಹೃದಯಾಘಾತದ ಎಚ್ಚರಿಕೆಯ ಸಂಕೇತಗಳು: ನಿಮ್ಮ ಎದೆಯ ಮಧ್ಯದಲ್ಲಿ ನೋವು ಅಥವಾ ಒತ್ತಡವು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಬೆನ್ನು, ದವಡೆ, ಗಂಟಲು ಅಥವಾ ತೋಳಿನ ನೋವು ಅಸ್ವಸ್ಥತೆ ವಾಕರಿಕೆ ಬರುತ್ತದೆ. ಲಘು ತಲೆನೋವು, ತಣ್ಣನೆಯ ಬೆವರು, ಅಜೀರ್ಣ ಅಥವಾ ಎದೆಯುರಿ, ದೌರ್ಬಲ್ಯ ಆತಂಕ ಅಥವಾ ಉಸಿರಾಟದ ತೊಂದರೆ ಅಥವಾ ಅನಿಯಮಿತ ಹೃದಯ ಬಡಿತಗಳು, ಹೃದಯಾಘಾತದ ಲಕ್ಷಣ ಗಳಾಗಿರುತ್ತದೆ. ನೀವು ಮಹಿಳೆ ಯಾಗಿದ್ದರೆ ನಿಮಗೆ ಎದೆ ನೋವು ಅಥವಾ ಅಸ್ವಸ್ಥತೆ ಉಂಟಾಗುತ್ತದೆ. ಹೃದಯ ರೋಗದ ಸಮಸ್ಯೆಗಳನ್ನು ತಡೆಗಟ್ಟಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯರ ಅಭಿಪ್ರಾಯ ವನ್ನು ಪಡೆಯಬೇಕು.

?ವಿ. ಶೈಲು, ಕುಶಾಲನಗರ.