ಮಡಿಕೇರಿ, ಸೆ. 28: ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ತಾ. 29ರಿಂದ ಅ. 15ರ ವರೆಗೆ ಬೈಚನಹಳ್ಳಿ ಕುಶಾಲನಗರದಲ್ಲಿ ಏರ್ಪಡಿಸಲಾಗಿದೆ. ವರ್ತಕರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ತಿಳಿಸಲಾಗಿದೆ.