ವೀರಾಜಪೇಟೆ, ಸೆ. 26: ವೀರಾಜಪೇಟೆ ಮುಸ್ಲಿಂ ಸಹಕಾರ ಸಂಘ ಠೇವಣಿದಾರರಿಗೆ ಹಣ ಹಿಂತಿರುಗಿಸದೆ ಸತಾವಣೆ ಮಾಡುತ್ತಿರುವುದರಿಂದ ಚುನಾವಣೆಯಲ್ಲಿ ಕಾನೂನುಬದ್ಧವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಸಂಘದ ಇಂದಿನವರೆಗಿನÀ ಲೆಕ್ಕಪತ್ರಗಳ ಮಾಹಿತಿಯನ್ನು ಒದಗಿಸದೆ ಇಂದು ತುರ್ತು ಸಭೆಯನ್ನು ಕರೆದಿರುವುದನ್ನು ವಿರೋಧಿಸಿ ಸಂಘದ ನಿರ್ದೇಶಕರುಗಳಾದ ಡಿ.ಐ. ಏಜಾಜ್ ಹಾಗೂ ಪಿ.ಎ.ಹನೀಫ್ ಸಂಘದ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು.ಸಹಕಾರ ಸಂಘದ ಮಾಸಿಕ ಸಭೆಯನ್ನು ಕರೆಯದೆ ನೇರವಾಗಿ ಸಂಘದ ತುರ್ತು ಸಭೆಯನ್ನು ಕರೆದಿರುವುದು ಕಾನೂನು ಬಾಹಿರವಾಗಿದೆ. ಸಂಘದಲ್ಲಿ ಠೇವಣಿದಾರರ ಹಣವನ್ನು ಹಿಂತಿರುಗಿಸುವ ಕುರಿತು ಸಂಘದ ಆಡಳಿತ ಮಂಡಳಿ ನಿರ್ಲಕ್ಷ್ಯ ತಾಳಿದೆ. ಸಂಘದ ನಿರ್ದೇಶಕರು ಮಾಹಿತಿ ಹಕ್ಕಿನಲ್ಲಿ ಸಂಘದ ಠೇವಣಿ ಜಮಾ ಖರ್ಚಿನ ಲೆಕ್ಕವನ್ನು ಕೇಳಿದಾಗ ಇಲ್ಲದ ಸಬೂಬು ಹೇಳಿ ಎರಡು ತಿಂಗಳುಗಳಿಂದ ದಾಖಲೆ ನೀಡದೆ ಸತಾವಣೆ ನೀಡುತ್ತಿದ್ದಾರೆ. ಈ ಸಹಕಾರ ಸಂಘದ ಆಡಿಟ್‍ನ್ನು ಸಹಕಾರ ಸಂಘಗಳ ತಾಲೂಕು ಅಭಿವೃದ್ಧಿ ಅಧಿಕಾರಿ ಮೋಹನ್ ಅವರು ತನಿಖೆ ನಡೆಸುತ್ತಿದ್ದು, ಅಂತಿಮ ವರದಿಯಿಂದ ಸಂಘದ ಲೆಕ್ಕಾಚಾರದÀ ನಿಜಾಂಶ ಬೆಳಕಿಗೆ ಬರಲಿದೆ ಆಡಳಿತ ಮಂಡಳಿ ಈವರೆಗಿನ ಅಸಲಿ ಠೇವಣಿದಾರರ ಪಟ್ಟಿ, ಜಮಾ ಖರ್ಚಿನ ವಿವರದ ಮಾಹಿತಿ ನೀಡಿದರೆ ಸಂಘದಲ್ಲಿ ಎಷ್ಟು ಹಣದುರುಪಯೋಗವಾಗಿದೆ ಎಂದು ನೇರವಾಗಿ ಕಂಡು ಹಿಡಿಯಬಹುದು ಎಂದು ಏಜಾಜ್ ತಿಳಿಸಿದರು.
ನಿರ್ದೇಶಕ ಪಿ.ಎ.ಹನೀಫ್ ಮಾತನಾಡಿ ಅನೇಕ ವರ್ಷಗಳ ಹಿಂದಿನಿಂದ ಸಂಘದ
(ಮೊದಲ ಪುಟದಿಂದ) ಸೆಪ್ಟೆಂಬರ್ 20ರ ತನಕದ ಸಂಘದಲ್ಲಿ ಜಮೆಯಾಗಿರುವ ಠೇವಣಿಯ ನಗದು ಹಣ, ಸಾಲ ವಿತರಣೆ, ವಸೂಲಾತಿಯ ಕುರಿತು ಆಡಳಿತ ಮಂಡಳಿ ನಿರ್ದೇಶಕರಿಗೆ ಮಾಹಿತಿ ಒದಗಿಸ ಬೇಕು. ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇದರಲ್ಲಿ ಆಡಳಿತ ಮಂಡಳಿಯ ಒಳ ಸಂಚಿದೆ. ಇದಕ್ಕಾಗಿ ಇಂದು ಕಾನೂನು ಬಾಹಿರವಾಗಿ ನಡೆಯುತ್ತಿರುವ ತುರ್ತು ಸಭೆಯನ್ನು ನಿರ್ದೇಶಕನಾಗಿ ಬಹಿಷ್ಕರಿಸಿ ಸದಸ್ಯರುಗಳ ಪರವಾಗಿ ಪ್ರತಿಭಟನೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.