ಮಡಿಕೇರಿ, ಸೆ. 27: ತಾ. 28 ರಂದು (ಇಂದು) ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಕರೆ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡಿರುವ ಜಿಲ್ಲಾಡಳಿತವು ಅನುಮತಿಯಿಲ್ಲದೆ ಬಂದ್, ಪ್ರತಿಭಟನೆ ನಡೆಸಿದರೆ, ಪ್ರಾಕೃತಿಕ ವಿಕೋಪ ನಿರ್ವಹಣಾ ಕಾಯ್ದೆಯನ್ವಯ ಕಾನೂನಾತ್ಮಕ ಕ್ರಮ ಕೈಗೊಳ್ಳುವದಾಗಿ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲಾಡಳಿತದ ಪತ್ರಿಕಾ ಹೇಳಿಕೆ ಈ ಕೆಳಗಿನಂತಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು, ಕೇಂದ್ರ ಸರ್ಕಾರ ಭೂಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎ.ಪಿ.ಎಂ.ಸಿ, ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ತಾ. 25 ರಂದು ಕರೆಕೊಟ್ಟಿದ್ದ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೂಲಿಕಾರರ ಸಂಘ ಹಾಗೂ ಇನ್ನಿತರೆ ರೈತ ಸಂಘಟನೆಗಳು ಜಂಟಿಯಾಗಿ ತಾ. 28 ರ ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಈ ಹಿನ್ನೆಲೆ ಕೊಡಗಿನ ಗಡಿಭಾಗಗಳಲ್ಲಿ ರಸ್ತೆತಡೆ, ಪ್ರತಿಭಟನೆ, ಮುಷ್ಕರ ನಡೆಸುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಈ ಮಾಹಿತಿ ಅನ್ವಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಾ. 27 ರಂದು ಜಂಟಿ ಸಭೆ ನಡೆಸಿದರು. ಸದರಿ ಸಭೆಯಲ್ಲಿ ಈ ಕೆಳಕಂಡ ಅಂಶಗಳನ್ನು ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಯಿತು.
ಕೊಡಗು ಜಿಲ್ಲೆಯಾದ್ಯಂತ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ-2005 ಜಾರಿಯಲ್ಲಿದ್ದು, ಯಾವುದೇ ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಾದಲ್ಲಿ ಜಿಲ್ಲಾಡಳಿತದಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳ ಬೇಕು. ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗದಂತೆ ಕಾರ್ಯಕ್ರಮ ಗಳನ್ನು ನಡೆಸುವುದು ಕಡ್ಡಾಯ ವಾಗಿರುತ್ತದೆ. ಪೂರ್ವಾನುಮತಿ ಪಡೆಯದೇ ನಡೆಸುವ ಕಾರ್ಯಕ್ರಮಗಳ ಆಯೋಜಕರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತೀರ್ಮಾನಿ ಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ಬಂದ್‍ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸು ವವರು ಕೋವಿಡ್-19 ಮಾರ್ಗಸೂಚಿ ಯಂತೆ ಮುಖಗವಸನ್ನು ಕಡ್ಡಾಯ ವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಮಾರ್ಗಸೂಚಿಯನ್ನು ಉಲ್ಲಂಘಿಸಿ ದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತೀರ್ಮಾನಿಸ ಲಾಯಿತು.
ದೇಶದ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 77/2017 ರಲ್ಲಿ ನೀಡಿರುವ ತೀರ್ಪಿನಲ್ಲಿ ಯಾವುದೇ ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರ ಇತ್ಯಾದಿ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾದ ಪಕ್ಷದಲ್ಲಿ ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರಕ್ಕೆ ಕರೆಕೊಟ್ಟಿರುವ ಸಂಘಟನಾಕಾರ ರಿಂದಲೇ ಇಂತಹ ಆಸ್ತಿಯ ನಷ್ಟ ಭರಿಸಬೇಕೆಂದು ಆದೇಶ ನೀಡಿರುತ್ತದೆ. ಆದ್ದರಿಂದ ತಾ. 28 ರಂದು ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರ ಸಂದರ್ಭದಲ್ಲಿ ಯಾವುದೇ ರೀತಿಯ ಅಂಗಡಿ ಮುಗ್ಗಟ್ಟುಗಳು, ಸರ್ಕಾರಿ ಕಛೇರಿಗಳನ್ನು ಬಲವಂತವಾಗಿ ಮುಚ್ಚಿಸುವುದು ಕಾನೂನುಬಾಹಿ ರವಾಗಿದೆ. ಅಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜರುಗಿಸುವಂತೆ ತೀರ್ಮಾನಿಸ ಲಾಯಿತು.
ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯುಂಟಾದರೆ, ಪ್ರತಿಭಟನೆಯನ್ನು ಆಯೋಜಿಸಿರುವ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಮೊಕದ್ದಮೆ ದಾಖಲಿಸುವಂತೆ ತೀರ್ಮಾನಿಸಲಾಯಿತು. ಸಾರ್ವಜನಿಕ / ಸರ್ಕಾರಿ ಆಸ್ತಿಗೆ ಆದ ನಷ್ಟವನ್ನು ಬಂದ್ / ಪ್ರತಿಭಟನೆ ಆಯೋಜಕರಿಂದಲೇ ಭರಿಸುವಂತೆ ತೀರ್ಮಾನಿಸಲಾಯಿತು.
ರಸ್ತೆತಡೆ, ಮೆರವಣಿಗೆ ಇತ್ಯಾದಿಗಳನ್ನು ಮಾಡಿದಲ್ಲಿ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ವಹಿವಾಟಿಗೆ ತೊಂದರೆಯಾಗಿ, ಶಾಂತಿಭಂಗವುಂಟಾಗುವ ಸಂಭವವಿರುವುದರಿಂದ ರಸ್ತೆತಡೆ ಹಾಗೂ ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರಸ್ತೆತಡೆ, ಮೆರವಣಿಗೆ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸು ವಂತೆ ತೀರ್ಮಾನಿ ಸಲಾಯಿತು.