ಮಡಿಕೇರಿ, ಸೆ. 27: ಏಳನೇ ಹೊಸಕೋಟೆ ಬಿಜೆಪಿ ಶಕ್ತಿಕೇಂದ್ರ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜನ್ಮದಿನಾಚರಣೆಯನ್ನು ತೋಂಡೂರು ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ ಮಾಧವನ್ ಉದ್ಘಾಟಿಸಿದರು.
ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರಾಮಚಂದ್ರ ಶ್ಯಾಮ್ ಮತ್ತು ಆರೆಸ್ಸೆಸ್ ಕಾರ್ಯಕರ್ತರಾದ ಸಂತೋಷ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮ ಪ್ರಯುಕ್ತ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರಾಮಚಂದ್ರ ಓಬಿಸಿ ಘಟಕ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸದಸ್ಯ ಬಿಜು, ಯುವಮೋರ್ಚಾ ಅಧ್ಯಕ್ಷ ಕಿರಣ್, ಅಲ್ಪಸಂಖ್ಯಾತ ಅಧ್ಯಕ್ಷ ರೋಷನ್, ಎಸ್ಟಿ ಮೋರ್ಚಾ ಅಧ್ಯಕ್ಷ ವಸಂತ್, ಬಿಜೆಪಿ ತಾಲೂಕು ಸಮಿತಿ ಸದಸ್ಯರಾದ ದಿಲೀಪ್, ಯುವ ಮೋರ್ಚಾ ತಾಲೂಕು ಸದಸ್ಯ ರತನ್, ಪಂಚಾಯಿತಿ ಮಾಜಿ ಸದಸ್ಯ ಉಮೇಶ್, ವಿಕ್ರಂ, ರಮೇಶ್, ಜೀವನ್ ಹಾಗೂ ಬಿಜೆಪಿ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.