ಮಡಿಕೇರಿ, ಸೆ. 27: ಮೂರು ಕೊಡವ ಕುಟುಂಬಸ್ಥರಿಂದ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಭಾಗಮಂಡಲದಲ್ಲಿ ಪೂಜೆ ನಿರ್ವಹಿಸಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುವದು. ಬಳಿಕ ತಲಕಾವೇರಿಗೆ ತೆರಳಿ ಅಲ್ಲಿಯೂ ಪೂಜೆ ಬಳಿಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುವದು. ಮಂಡೀರ, ಮಣವಟ್ಟೀರ ಹಾಗೂ ಪಟ್ಟಮಾಡ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಾಗಿ ಮಂಡೀರ ದೇವಿ ಪೂಣಚ್ಚ ತಿಳಿಸಿದ್ದಾರೆ.