ಶನಿವಾರಸಂತೆ, ಸೆ. 27: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಕಣಗಾಲು ಗ್ರಾಮದ ನಿವಾಸಿ ಸೋಮಯ್ಯ (48) ಅವರು ತಾ. 26ರಂದು ದೊಡ್ಡ ಕಣಗಾಲು ಗ್ರಾಮದ ದೊಡ್ಡ ಕೆರೆಯ ತೂಬಿನ ಹತ್ತಿರ ಕಾಲು ತೊಳೆಯಲು ಹೋದಾಗ ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸೋಮಯ್ಯ ಗದ್ದೆಗೆ ಹೋಗಿ ಬರುವುದಾಗಿ ಪತ್ನಿ ಲೀಲಾವತಿಗೆ ಹೇಳಿ ಹೋದವರು ಸಂಜೆಯಾದರೂ ಮನೆಗೆ ಬಾರದೆ, ಮಗ ಹೋಗಿ ನೋಡಲಾಗಿ ಕೆರೆಯ ಹತ್ತಿರ ಚಪ್ಪಲಿ ಹಾಗೂ ಮೊಬೈಲ್ ಕಂಡುಬಂದಿತು. ತಾ. 27ರಂದು ಪೊಲೀಸರಿಗೂ, ಅಗ್ನಿಶಾಮಕ ದಳದವರಿಗೂ ತಿಳಿಸಿದ್ದು, ಇಂದು ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಪತ್ನಿ ಲೀಲಾವತಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.