ಎನ್.ಎಸ್.ಎಸ್. ದಿನಾಚರಣೆ

ಗೋಣಿಕೊಪ್ಪ ವರದಿ, ಸೆ. 27: ಮಾನವೀಯತೆ ಮೈಗೂಡಿಸಿಕೊಂಡು ನಿಸ್ವಾರ್ಥ ಸೇವೆ ಮೂಲಕ ಮಾದರಿಯಾಗಬೇಕು ಎಂದು ಪ್ರಾಂಶುಪಾಲ ಪೆÇ್ರ. ಕುಸುಮಾಧರ್ ಅಭಿಪ್ರಾಯಪಟ್ಟರು.

ಇಲ್ಲಿನ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಎನ್.ಎಸ್.ಎಸ್. ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡರು.

ಕೊರೊನಾ ಮತ್ತು ಪ್ರವಾಹದ ಸಂದರ್ಭ ಸ್ವಯಂ ಸೇವಕರಾಗಿ ಸೇವೆ ನೀಡಿದ ಎನ್‍ಎಸ್‍ಎಸ್ ಸೇವಕರ ಕಾರ್ಯ ಮೆಚ್ಚುವಂತದ್ದು, ಇಂತಹ ಮನೋಭಾವನೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಹಿರಿಯ ಪ್ರಾಧ್ಯಾಪಕಿ ಪೆÇ್ರ. ಎಂ.ಎಸ್. ಭಾರತಿ, ಪೆÇ್ರ. ಎಂ.ಬಿ. ಕಾವೇರಪ್ಪ, ಪೆÇ್ರ. ಆರ್. ತಿಪ್ಪೆಸ್ವಾಮಿ, ಅಧೀಕ್ಷಕ ಸೋಮನಾಥ, ಎನ್.ಎಸ್.ಎಸ್ ಯೋಜನಾಧಿಕಾರಿ ವನಿತ್‍ಕುಮಾರ್, ಎನ್.ಪಿ. ರೀತಾ ಇದ್ದರು.