ಸಿದ್ದಾಪುರ, ಸೆ. 27: ವಿಶೇಷಚೇತನ ಮಕ್ಕಳಿಗೆ ದಾನಿಗಳ ವತಿಯಿಂದ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. ವೀರಾಜಪೇಟೆಯ ಬಿ.ಆರ್.ಸಿ ಕೇಂದ್ರದಲ್ಲಿ ಏರ್ಪಡಿಸಲಾದ ಸರಳ ಕಾರ್ಯಕ್ರಮದಲ್ಲಿ ವೀರಾಜಪೇಟೆ ಭಾರತೀಯ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಆರ್.ಬಿ. ನಾಯಕ್ ಅವರು ಉದಾರವಾಗಿ ನೀಡಿದ ಎರಡು ಗಾಲಿ ಕುರ್ಚಿಗಳನ್ನು ಎರಡು ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಮಾತನಾಡಿ, ಕಾರ್ಯಕ್ರಮದಲ್ಲಿ ಎಲ್.ಐ.ಸಿ ಕಚೇರಿಯ ಅಧಿಕಾರಿ ಆರ್.ಬಿ ನಾಯಕ್ ಹಾಗೂ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಕೇಶವಮೂರ್ತಿ, ಕೆ.ಎಸ್ ಅಜಿತಾ ಚಂದ್ರನ್, ಕೆ.ಕೆ ಸುಷಾ ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.