ಮಡಿಕೇರಿ, ಸೆ.27: ವಿಧಾನಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಅಧಿವೇಶನದಲ್ಲಿ ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.ಮಡಿಕೇರಿಯಲ್ಲಿ ನಿರ್ಮಾಣ ವಾಗುತ್ತಿರುವ ಕೊಡವ ಹೆರಿಟೇಜ್ ಕಾಮಗಾರಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಬಂದಿದ್ದಲ್ಲಿ ಕಾಮಗಾರಿ ಅನುಮೋದನೆ ಗೊಂಡ ವರ್ಷ ಮತ್ತು ಕಾಮಗಾರಿಗೆ ಇಲ್ಲಿಯವರೆಗೆ ಬಿಡುಗಡೆಯಾಗಿರುವ ಅನುದಾನದ ವಿವರ ಮತ್ತು ಕಾಮಗಾರಿಯು ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು.ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ ರವಿ ಅವರು ಮಾಹಿತಿ ನೀಡಿ ಕೊಡವ ಹೆರಿಟೇಜ್ ಕಾಮಗಾರಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾಮಗಾರಿಯು 2004-05 ನೇ ಸಾಲಿನಲ್ಲಿ ಅನುಮೋದನೆಗೊಂಡಿದೆ. ಕಾಮಗಾರಿಗೆ ಈವರೆಗೆ 253.54 ಲಕ್ಷ ರೂ.ಗಳನ್ನು ಕೊಡಗು ಜಿಲ್ಲಾಧಿಕಾರಿ ಇವರಿಗೆ ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿದರು. ಅಲ್ಲದೆ 2004-05ನೇ ಸಾಲಿನಲ್ಲಿ ಮಡಿಕೇರಿಯ ಕೊಡವ ಹೆರಿಟೇಜ್ ಸೆಂಟರ್ ಅಭಿವೃದ್ಧಿಪಡಿಸುವ 88.75 ಲಕ್ಷ ರೂ.ಗಳ ಅಂದಾಜು ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಭಾರತ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯ ಅನುಮೋದನೆ ನೀಡಿ, ರೂ. 33.54 ಲಕ್ಷಗಳನ್ನು ಅನುಷ್ಠಾನ ಸಂಸ್ಥೆಯಾದ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಗೆ ಬಿಡುಗಡೆ ಮಾಡಿದೆ. ನಿಗಧಿತ ಅವಧಿಯಲ್ಲಿ ಕಾಮಗಾರಿ
(ಮೊದಲ ಪುಟದಿಂದ) ಅನುಷ್ಠಾನಗೊಳಿಸದ ಕಾರಣ 2010-11 ನೇ ಸಾಲಿನಲ್ಲಿ ಈ ಯೋಜನೆಯನ್ನು ಜಿಲ್ಲಾಧಿಕಾರಿ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಿ ರೂ.33.54 ಲಕ್ಷಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.
ಈ ಕಾಮಗಾರಿ ನಿರ್ಮಾಣಕ್ಕೆ ರೂ.145 ಲಕ್ಷಗಳ ಮೊತ್ತದ ಅಂದಾಜುಪಟ್ಟಿಗೆ 2010ರ ಆಗಸ್ಟ್ 18 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇ-ಟೆಂಡರ್ ಮೂಲಕ ಗುತ್ತಿಗೆದಾರ ಎಂ.ಬಿ ಹೇಮಾಶಂಕರ್, ಮೈಸೂರು ಇವರಿಗೆ ರೂ.1,44,10,825.81 ಮೊತ್ತಕ್ಕೆ ಕಾರ್ಯಾದೇಶ ನೀಡಿ 12 ತಿಂಗಳ ಕಾಲಾವಕಾಶದೊಂದಿಗೆ ವಹಿಸಲಾಗಿತ್ತು ಎಂದು ಸಚಿವರು ಉತ್ತರಿಸಿದರು.
ಕಾಮಗಾರಿಯ ನಿರ್ಮಾಣಕ್ಕೆ ವಹಿಸಿದ ಸ್ಥಳವು ಗುಡ್ಡದ ಮೇಲಿದ್ದರಿಂದ ಹಾಗೂ ಇಳಿಜಾರು ಪ್ರದೇಶದಲ್ಲಿ ಲ್ಯಾಟರೇಟ್ ತಳಪಾಯ ಹಾಕಿದಲ್ಲಿ ಜಾರುವ ಸಾಧ್ಯತೆ ಇದ್ದುದರಿಂದ ಮರು ವಿನ್ಯಾಸದ ಅನುಮೋದನೆ ಕೋರಿ 2011 ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ತಡೆಗೋಡೆಗಳನ್ನು ಕಾಂಕ್ರೀಟ್‍ನಲ್ಲಿ ಅಳವಡಿಸುವಂತೆ ಮುಖ್ಯ ಇಂಜಿನಿಯರ್ ಸೂಚಿಸಿದ್ದರು. ಈ ಬದಲಾವಣೆಯಿಂದಾದ ವಿನ್ಯಾಸದಿಂದ ಕೆಲವು ಹೆಚ್ಚುವರಿ ಕೆಲಸ ಉದ್ಭವಿಸಿದ್ದು ಈ ಕಾಮಗಾರಿಗಳ ನಿರ್ವಹಣೆಗಾಗಿ ಹೆಚ್ಚುವರಿಯಾಗಿ ರೂ. 1,24,72,050.40 ಗಳ ಅನುದಾನದ ಅವಶ್ಯಕತೆ ಉಂಟಾಗಿ ನಿರ್ಮಾಣಕ್ಕೆ ತಗಲುವ ಒಟ್ಟಾರೆ ರೂ.2,68,04,000 ಗಳಿಗೆ ಪರಿಷ್ಕøತ ಅಂದಾಜು ವೆಚ್ಚದ ಪಟ್ಟಿಗೆ ಸರ್ಕಾರದ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿಯ ಪರಿಷ್ಕøತ ಅಂದಾಜು ಪಟ್ಟಿಯ ಅನುಸಾರ ಕೆಲಸವನ್ನು ಗುತ್ತಿಗೆದಾರರು ಪ್ರಾರಂಭಿಸಿ ಮಂದಗತಿಯಲ್ಲಿ ನಿರ್ವಹಿಸುತ್ತಿದ್ದುದರಿಂದ ಗುತ್ತಿಗೆದಾರರಿಗೆ ಹಲವಾರು ತಿಳುವಳಿಕೆ ನೋಟೀಸ್ ನೀಡಿದರೂ ಕಾಮಗಾರಿ ಬಗ್ಗೆ ಆಸಕ್ತಿ ವಹಿಸದ ಕಾರಣ ಗುತ್ತಿಗೆದಾರರ ಕರಾರನ್ನು 2016 ರ ಜನವರಿ 4 ರಂತೆ ರದ್ದುಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವರು ವಿವರಿಸಿದರು.
ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಗುತ್ತಿಗೆ ಕರಾರರನ್ನು 2018 ರ ನವೆಂಬರ್ 27 ರಲ್ಲಿ ರದ್ದುಗೊಳಿಸಲಾಗಿದೆ. ಗುತ್ತಿಗೆದಾರರು ಗೋಡೆ ಕಟ್ಟಡ ಹಾಗೂ ಮಂಗಳೂರು ಹೆಂಚಿನ ಛಾವಣಿ ಕಾಮಗಾರಿಯನ್ನು ಭಾಗಶಃ ನಿರ್ವಹಿಸಿರುತ್ತಾರೆ.
ಮುಖ್ಯ ಅಭಿಯಂತರ ಲೋಕೋಪಯೋಗಿ ಇಲಾಖೆ ಇವರು ಸಲ್ಲಿಸಿರುವ ರೂ. 3,30,45,110 ಲಕ್ಷಗಳ ಪರಿಷ್ಕøತ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿ 2020 ರ ಮೇ 27 ರಂದು ಹೊಸ ಆದೇಶ ಹೊರಡಿಸಲಾಗಿದೆ. ಈ ಕಾರಣಗಳಿಂದಾಗಿ ಕಾಮಗಾರಿಯ ಅನುಷ್ಠಾನ ಸಂಸ್ಥೆಗಳು, ಕಾಮಗಾರಿಯ ವಿನ್ಯಾಸ ಹಾಗೂ ಅಂದಾಜು ಪಟ್ಟಿಗಳಲ್ಲಿ ಅನೇಕ ಬಾರಿ ಬದಲಾವಣೆಗಳಾಗಿರುವುದು ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭ ವೀಣಾ ಅಚ್ಚಯ್ಯ ಅವರು ಯಾವ ಕಾಲ ಮಿತಿಯೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಪ್ರಶ್ನಿಸಿದರು. ಉಳಿಕೆ ಕಾಮಗಾರಿಯನ್ನು ರೂ.97 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಗುತ್ತಿಗೆದಾರರಿಗೆ ಒಪ್ಪಿಗೆ ಪತ್ರ ನೀಡಿ 10 ತಿಂಗಳ ಅವಧಿಗೆ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಸಿ.ಟಿ ರವಿ ಮಾಹಿತಿ ನೀಡಿದರು.