ಮಡಿಕೇರಿ, ಸೆ. 25: ಚೆಂಬು ವಲಯ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ರವಿರಾಜ್ ಹೊಸೂರು ಆಯ್ಕೆಯಾಗಿದ್ದಾರೆ. ಚೆಂಬು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಚೆಂಬು ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕಾಚೇಲು ವಾಸುದೇವ, ಕುದುರೆಪಾಯ ಚೆನಿಯಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ರಘುನಾಥ್, ಖಜಾಂಚಿಯಾಗಿ ಹಾರಂಬಿ ಅರುಣೋದಯ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ಗಮಿತ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಸುರೇಶ್ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯ ಎನ್.ಸಿ. ಮನೋಹರ್, ಹಿರಿಯ ಕಾಂಗ್ರೆಸ್ಸಿಗ ಕೆ.ಎ. ಪಕೀರ, ನಡುಬೆಟ್ಟು ಚೆನ್ನಪ್ಪ, ಪನೇಡ್ಕ ಪೆÇನ್ನಪ್ಪ ಹಾಗೂ ಇತರರು ಇದ್ದರು.