ಮಡಿಕೇರಿ: ಸುರೇಶ್ ಅಂಗಡಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರ ಬಿ.ಜೆ.ಪಿ. ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲಾಧ್ಯಕ್ಷ ರಾಬಿನ್ ದೇವಯ್ಯ, ನಗರ ಅಧ್ಯಕ್ಷ ಮನು ಮಂಜುನಾಥ್, ವಕ್ತಾರ ಮಹೇಶ್ ಜೈನಿ, ಉಪಾಧ್ಯಕ್ಷ ಅರುಣ್ ಕುಮಾರ್, ಕಾರ್ಯಾಲಯ ಕಾರ್ಯದರ್ಶಿ ಜಗದೀಶ್, ಖಜಾಂಚಿ ಮುರುಗನ್, ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ಜೀವನ್, ಅನಿತಾ ಪೂವಯ್ಯ, ಬಾಲಕೃಷ್ಣ, ರೆಜಿ, ಕಲಾವತಿ, ಕನ್ನಿಕೆ, ಗೌರಮ್ಮ, ಶಿವಕುಮಾರಿ, ಮುರುಗೇಶ್, ಗಣೇಶ್ ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು.ಕೂಡಿಗೆ: ಸುರೇಶ್ ಅಂಗಡಿಯವರಿಗೆ ಬಸವನತ್ತೂರು ಬೂತ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ಬೂತ್ ಅಧ್ಯಕ್ಷ ಆರ್. ಕೃಷ್ಣ, ಬೂತ್ನ ಪ್ರಧಾನ ಕಾರ್ಯದರ್ಶಿ ಪ್ರವೀಣ, ತಾಲೂಕು ಉಪಾಧ್ಯಕ್ಷ ಕೆ. ವರದ, ಮಾಜಿ ಪಂಚಾಯಿತಿ ಅಧ್ಯಕ್ಷ ವಾಂಚೀರ ಮನು ನಂಜುಂಡ, ರವಿ, ಕಿರಣ್, ಸಜಿತ್, ಶಿವಣ್ಣ ಗೌಡ ಮತ್ತು ಪ್ರಮುಖರು ಹಾಗೆಯೇ ಮಹಿಳಾ ಪ್ರಮುಖರಾದ ಕೆ. ಕನಕ, ಸಾವಿತ್ರಿ ರಾಜನ್, ಪವಿತ್ರ, ನೂತನ್, ಗೌರಮ್ಮ, ಮಂಜುಳಾ, ಜಯಮ್ಮ ಇನ್ನೂ ಅನೇಕರು ಭಾಗವಹಿಸಿದ್ದರು.ಆಲೂರು-ಸಿದ್ದಾಪುರ: ಸುರೇಶ್ ಅಂಗಡಿ ಅವರ ನಿಧನದ ಹಿನ್ನೆಲೆ ಸಮೀಪದ ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಜಂಕ್ಸನ್ನಲ್ಲಿ ಬಿ.ಜೆ.ಪಿ. ಪ್ರಮುಖರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅಗಲಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಿ.ಜೆ.ಪಿ. ಕಾರ್ಯಕರ್ತರು ಅಗಲಿದ ನಾಯಕನ ಗೌರವಾರ್ಥವಾಗಿ 1 ನಿಮಿಷ ಮೌನಾಚರಣೆ ಸಲ್ಲಿಸಿದರು. ಈ ಸಂದರ್ಭ ಬಿ.ಜೆ.ಪಿ. ಪ್ರಮುಖರಾದ ಎಸ್.ಎಂ. ಉಮಾಶಂಕರ್, ಡಿ.ಬಿ. ಧರ್ಮಪ್ಪ, ಎಸ್.ಜೆ. ಸುನಿಲ್, ಕಿರಣ್, ಮನು, ಶಿವಾನಂದ್ ಮುಂತಾದವರು ಇದ್ದರು.ಕೂಡಿಗೆ: ಕೂಡಿಗೆ ಬಿ.ಜೆ.ಪಿ. ಸಮಿತಿಯ ವತಿಯಿಂದ ಅಗಲಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಗೆ ಕೂಡಿಗೆ ವೃತ್ತದ ಸಮೀಪದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್, ತಾಲೂಕು ಕಾರ್ಯದರ್ಶಿ ಕೆ. ವರದ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಿರೀಶ್ಕುಮಾರ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ತಾಲೂಕು ಘಟಕಗಳ ಅಧ್ಯಕ್ಷರು, ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಬೂತ್ ಸಮಿತಿಯ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.ಗೋಣಿಕೊಪ್ಪ ವರದಿ: ಸಚಿವ ಸುರೇಶ ಅಂಗಡಿ ನಿಧನಕ್ಕೆ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್, ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಗೌರವ ಸೂಚಿಸಿದರು.
ಕುಶಾಲನಗರ: ಕೊರೊನಾ ಸೋಂಕಿಗೆ ತುತ್ತಾದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆ ಆವರ ಆತ್ಮಕ್ಕೆ ಶಾಂತಿಕೋರಿ ಕುಶಾಲನಗರ ನಗರ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ಹಿರಿಯ ನಾಯಕ ಜಿ.ಎಲ್.ನಾಗರಾಜ್. ಕುಡಾ ಅಧ್ಯಕ್ಷ ಚರಣ್, ಕೆ.ಜಿ. ಮನು, ಹೆಚ್.ಡಿ. ಶಿವಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್ ರಾಜ್, ಎಂ.ಡಿ. ಕೃಷ್ಣಪ್ಪ, ಗೌತಮ್, ಎಂ.ವಿ. ನಾರಾಯಣ, ಚಂದ್ರಶೇಖರ್, ಸುಮನ್, ಚೆನ್ನಯ್ಯ, ಜಿ. ಮನು ಕುಮಾರ್, ಕೆ. ವರದ, ಕೆ.ಎನ್. ದೇವರಾಜ್, ಉಮಾಶಂಕರ್, ಮಧುಸೂದನ, ಚೆಲುವರಾಜ್, ಕೃಷ್ಣಯ್ಯಶೆಟ್ಟಿ, ಬೋಸ್ ಮೊಣ್ಣಪ್ಪ, ಮತ್ತಿತರರು ಇದ್ದರು.