ಸೋಮವಾರಪೇಟೆ, ಸೆ. 25: ಕೆಂಚಮ್ಮನಬಾಣೆಯ ಕೆ.ಡಿ. ಲಕ್ಷ್ಮಿ (29) ಎಂಬವರು ನಾಪತ್ತೆಯಾಗಿದ್ದು, ಪತಿ ಐತ್ತಪ್ಪ ಅವರ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾ. 25 ರಂದು ಹಾಸನದಲ್ಲಿರುವುದಾಗಿ ಪತಿಗೆ ಫೋನ್ ಮೂಲಕ ತಿಳಿಸಿದ್ದು, ನಂತರ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಐತ್ತಪ್ಪ ಅವರು ದೂರು ನೀಡಿದ್ದಾರೆ. ಲಕ್ಷ್ಮಿ ಅವರು ಪತ್ತೆಯಾದಲ್ಲಿ 08276-282040 ಠಾಣೆಗೆ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ತಿಳಿಸಿದೆ.