ವೀರಾಜಪೇಟೆ, ಸೆ. 25: ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೆರಳಿ ವನ್ಯಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ.

ವೀರಾಜಪೇಟೆ ತಾಲೂಕಿನ ತಿತಿಮತಿ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಕಳೆದ ತಾ. 20 ರಂದು ಅಕ್ರಮವಾಗಿ ತೆರಳಿ ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಮೃಗಗಳ ಸಂರಕ್ಷಣಾ ಇಲಾಖೆಯು ಮೊಕದ್ದಮೆ ದಾಖಲಿಸಿಕೊಂಡಿತ್ತು. ಆರೋಪಿತರಾದ ಎನ್.ಬಿ. ಮನು ಮತ್ತು ಪಣಿ ಎರವರ ಮಂಜು ಎಂಬವರಿಗೆ ಪೊನ್ನಂಪೇಟೆ ನ್ಯಾಯಾಲಯವು ತಲಾ ರೂ. 50 ಸಾವಿರ ವೈಯಕ್ತಿಕ ಬಾಂಡ್ ಮತ್ತು ಒಂದು ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿಗಳ ಪರ ವಕೀಲ ಚೋವಂಡ ಕೆ.ಪೊನ್ನಣ್ಣ ವಾದ ಮಂಡಿಸಿದರು.