ಸೋಮವಾರಪೇಟೆ, ಸೆ. 25: ಇಲ್ಲಿನ ಇನ್ನರ್‍ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಚೌಡ್ಲು ಸಾಂದೀಪನಿ ಶಾಲೆಗೆ ಉಚಿತವಾಗಿ ಸ್ಯಾನಿಟೈಸರ್ ಹಾಗೂ ಸ್ಟ್ಯಾಂಡ್ ವಿತರಿಸಲಾಯಿತು. ಕ್ಲಬ್‍ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪದಾಧಿಕಾರಿಗಳಾದ ತನ್ಮಯಿ ಪ್ರವೀಣ್, ಲತಾ ನಾಗೇಶ್, ಭಾಗ್ಯಕೃಷ್ಣ, ಪ್ರೇಮಾ ಹೃಷಿಕೇಶ್, ಕಾವೇರಿ ಸುರೇಶ್, ಮುಖ್ಯಶಿಕ್ಷಕಿ ಲಕ್ಷ್ಮೀ ಸೇರಿದಂತೆ ಇತರರು ಉಪಸ್ಥಿತರಿದ್ದರು.