ಸಂಪಾಜೆ, ಸೆ. 24: ಮಂಗಳೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಸಂಪಾಜೆ ಗ್ರಾಮದ ಕೊಯನಾಡು ಶಾಲೆ ಪಕ್ಕದ ದೇವರಗುಂಡಿ ಎಂಬಲ್ಲಿ ನಿರಂತರ ಸುರಿಯುವ ಮಳೆಯಿಂದಾಗಿ ಪಯಸ್ವಿನಿ ನದಿಯ ನೀರಿನ ಹೊಡೆತಕ್ಕೆ ಹೆದ್ದಾರಿಯ ಸಮೀಪ ಮಣ್ಣು ಕುಸಿತಗೊಂಡಿದೆ. ರಸ್ತೆ ಅಪಾಯ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.