ಮಡಿಕೇರಿ, ಸೆ. 24: ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳ ಹನಿ ನೀರಾವರಿಗೆ ಶೇ.90ರ ಸಹಾಯಧನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರು ಖರೀದಿಸಿದ ಪರಿಕರ/ ಯಂತ್ರೋಪಕರಣಗಳಿಗೆ ಶೇ.40ರ ಸಹಾಯಧನ, ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಪವರ್ ಟಿಲ್ಲರ್) ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ರೈತರು ಆರ್.ಟಿ.ಸಿ., ಆದಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಮೀಪದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಗೆ ಮುದ್ದಾಂ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ ನೋಂದಾಣಿ ಮಾಡಿಕೊಳ್ಳಲು ಕೋರಿದೆ. ಅರ್ಜಿಯನ್ನು ಅಕ್ಟೋಬರ್ 16 ರೊಳಗೆ ನೀಡುವಂತೆ ಮಡಿಕೇರಿ ತೋಟಗಾರಿಕೆ ಉಪ ನಿರ್ದೇಶಕರು ಕೋರಿದ್ದಾರೆ.