ಕೂಡಿಗೆ, ಸೆ. 24: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಿ ಈ ಸಾಲಿನಲ್ಲಿ ಸಂತೆ ಎತ್ತುವಳಿಯು ರೂ. 1.5 ಲಕ್ಷಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ತಾ. 26 ರಿಂದ ಸಂತೆ ಆರಂಭಗೊಳ್ಳಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ತಿಳಿಸಿದ್ದಾರೆ.
ಕಳೆದ ಆರು ತಿಂಗಳುಗಳಿಂದ ಲಾಕ್‍ಡೌನ್ ಹಿನ್ನೆಲೆ ಸಂತೆಯ ಹರಾಜು ಪ್ರಕ್ರಿಯೆ ನಡೆಯದೆ ಸ್ಥಗಿತಗೊಂಡಿತ್ತು. ಇದೀಗ ವ್ಯಾಪಾರಿಗಳು ಸಂತೆಯಲ್ಲಿ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ನಡುವೆ ವ್ಯಾಪಾರ ನಡೆಸಬೇಕು, ಗ್ರಾಮ ಪಂಚಾಯಿತಿ ನಿಯಮನುಸಾರವಾಗಿ ಸಂತೆ ಸುಂಕ ಎತ್ತುವಳಿಯನ್ನು ನಡೆಸಬೇಕು. ತಾ. 26 ರಿಂದ ಸಂತೆಯು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಮೀಪದ ಮಾರುಕಟ್ಟೆಯ ಜಾಗದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.