ಸೋಮವಾರಪೇಟೆ, ಸೆ. 24: ಸಮೀಪದ ಐಗೂರು ಕಲ್ಲೈನ್ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್ಟೇಟ್‍ನ ಲೈನ್‍ಮನೆಯಲ್ಲಿದ್ದ ಮೂಲತಃ ಬಳ್ಳಾರಿ ಜಿಲ್ಲೆಯ ಪಂಪಾನಾಯ್ಕ ಅವರ ಪುತ್ರಿ ಡಿ. ಸುನೀತಾ (19) ಎಂಬಾಕೆ ಕಳೆದ ಫೆಬ್ರವರಿ 6 ರಿಂದ ಕಾಣೆಯಾಗಿರುವದಾಗಿ ಪೋಷಕರು ದೂರು ನೀಡಿದ್ದಾರೆ.
ಸುನೀತಾ ಕಾಣೆಯಾದ ದಿನದಂದೇ ಇದೇ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ಪುಲಿಕೇಶಿ ನಾಯ್ಕ ಎಂಬಾತನೂ ಕಾಣೆಯಾಗಿದ್ದಾನೆ. ತನ್ನ ಮಗಳು ಕಾಣೆಯಾದ ಪ್ರಕರಣದಲ್ಲಿ ಈತನ ಮೇಲೆ ಅನುಮಾನವಿದ್ದು, ಪತ್ತೆಹಚ್ಚಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆಗೆ 08276 282040ಗೆ ತಿಳಿಸುವಂತೆ ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.