ಆಲೂರುಸಿದ್ದಾಪುರ, ಸೆ. 24: ಕೋವಿಡ್-19 ವೈರಸ್ ರಾಜ್ಯದಲ್ಲಿ ವ್ಯಾಪಕ ಹರಡುತ್ತಿದ್ದು ಇದರ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಘೋಷಿಸಿರುವ ಮಾರ್ಗಸೂಚಿಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ, ಮಾರ್ಗಸೂಚಿ ಪಾಲಿಸದ ಸಾರ್ವಜನಿಕರ ಮೇಲೆ ಕ್ರಮಕೈಗೊಂಡು ದಂಡ ವಿಧಿಸುವ ಎಚ್ಚರಿಕೆಯನ್ನು ಮತ್ತೆ ಜಾರಿಗೊಳಿಸಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಮೀಪದ ಶನಿವಾರಸಂತೆ ಗ್ರಾ.ಪಂ. ಅಧಿಕಾರಿಗಳು ಪಟ್ಟಣದಲ್ಲಿ ಕೋವಿಡ್ ವೈರಸ್ ನಿಯಂತ್ರಣಗೊಳಿಸುವ ಉದ್ದೇಶದಿಂದ ಪಟ್ಟಣದಲ್ಲಿರುವ ಎಲ್ಲಾ ಅಂಗಡಿ, ಹೊಟೇಲ್, ಕ್ಯಾಂಟೀನ್, ಇತರ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸುವುದು, ಮಾಸ್ಕ್ ಧರಿಸದ ಗ್ರಾಹಕರಿಗೆ ಗ್ರಾ.ಪಂ.ಯಿಂದ ನೂರು ದಂಡ ವಿಧಿಸಲಾಗುತ್ತದೆ. ಮಾಸ್ಕ್ ಧರಿಸದಿದ್ದರೂ ಗ್ರಾಹಕರೊಂದಿಗೆ ವ್ಯವಹರಿಸುವ ವರ್ತಕರಿಗೂ ದಂಡ ವಿಧಿಸಲು ಗ್ರಾ.ಪಂ. ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಶುಕ್ರವಾರದಿಂದ ಈ ನಿಯಮ ಜಾರಿಯಲ್ಲಿರುವ ಕುರಿತು ಗ್ರಾ.ಪಂ. ವತಿಯಿಂದ ಸಾರ್ವಜನಿಕರಿಗೆ ಧ್ವನಿವರ್ಧಕ ಮೂಲಕ ತಿಳಿಸಲಾಗುತ್ತಿದೆ.