ಮಡಿಕೇರಿ, ಸೆ. 24: ಜಿಲ್ಲೆಯ ಪೆÇಲೀಸ್ ಇಲಾಖಾ ಸಿಬ್ಬಂದಿಯೊಬ್ಬರಿಗೆ ಇತ್ತೀಚೆಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದು ಅವರನ್ನು ಮಡಿಕೇರಿಯ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿಯೂ ಚೇತರಿಕೆ ಕಾಣದ ಕಾರಣ ವೈದ್ಯರು ಪ್ಲಾಸ್ಮಾ ಚಿಕಿತ್ಸೆಗೆ ಸೂಚಿಸಿದರು. ಈ ಚಿಕಿತ್ಸೆಗೆ ಕೋವಿಡ್ನಿಂದ ಸಂಪೂರ್ಣ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ನೀಡಬೇಕಾದುದ್ದರಿಂದ ಮಾಹಿತಿ ತಿಳಿದ ಕೊಡಗು ಜಿಲ್ಲಾ ಭಜರಂಗದಳ ಸಂಯೋಜಕರು ತಕ್ಷಣವೇ ಇತ್ತೀಚೆಗೆ ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದ ಹಿಂ.ಜಾ.ವೇ. ಜಿಲ್ಲಾ ಪ್ರಚಾರ್ ಪ್ರಮುಖ್ರೊಂದಿಗೆ ಮೈಸೂರಿಗೆ ತೆರಳಿ ಅಗತ್ಯವಿದ್ದ ಪ್ಲಾಸ್ಮಾ ವ್ಯವಸ್ಥೆಯನ್ನು ಮಾಡಿದರು.
ಮೈಸೂರಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸುವ ದುಬಾರಿ ಬೆಲೆಯ ಉಪಕರಣವು ಮೈಸೂರಿನ ಜೀವದಾರ ಬ್ಲಡ್ ಬ್ಯಾಂಕ್ಗೆ ನೂತನವಾಗಿ ಆಗಮಿಸಿತ್ತು.
ಅದರ ಮೊದಲ ಬಳಕೆಯೇ ಕೊಡಗಿನ ಪ್ಲಾಸ್ಮಾ ದಾನಿ ಮತ್ತು ಕೊಡಗಿನ ಕೋವಿಡ್ ಪಾಸಿಟಿವ್ ವ್ಯಕ್ತಿಯ ಮೂಲಕವಾಗಿರುವುದಾಗಿ ಬ್ಲಡ್ ಬ್ಯಾಂಕ್ ಮುಖ್ಯಸ್ಥರು ಮಾಹಿತಿ ನೀಡಿದರು. ಸೋಂಕಿತರು ಪ್ಲಾಸ್ಮಾ ಚಿಕಿತ್ಸೆಗೆ ಸ್ಪಂದಿಸಿರುವುದಾಗಿಯೂ ತಿಳಿದು ಬಂದಿದೆ.